ರಾಜ್ಯ ಬಜೆಟ್​ ಕುರಿತು ತಜ್ಞರ ಅಭಿಪ್ರಾಯ: ಯೋಜನೆ ಅನುಷ್ಠಾನ ಮುಖ್ಯ

Budget City 6 mar 20
Published on

ರಾಜ್ಯ ಸರ್ಕಾರ ಮಂಡಿಸಿರುವ ಈ ಸಾಲಿನ ಬಜೆಟ್​ನಲ್ಲಿ ಬೆಂಗಳೂರು ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಇವೆಲ್ಲ ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬರಲಿವೆ ಎನ್ನುವುದು ಬಹಳ ಮುಖ್ಯ.

ಸರ್ಕಾರವು 8,344 ಕೋಟಿ ರೂ. ಮೊತ್ತದ ಕಾಮಗಾರಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ, ಈ ಯೋಜನೆ ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬರುತ್ತದೆ ಎಂಬುದನ್ನು ನೋಡಬೇಕಿದೆ. ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಬೇಕಾಗಿತ್ತು. ಪ್ರಸ್ತುತ ಬಜೆಟ್​ನಲ್ಲಿ ಒದಗಿಸಿರುವ ಅನುದಾನದ ಪ್ರಮಾಣ ಕಡಿಮೆಯಾಗಿದೆ. ಭವಿಷ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಬಿಎಂಟಿಸಿಗಾಗಿ ಇನ್ನಷ್ಟು ಬಸ್​ಗಳನ್ನು ಖರೀದಿಸಿದ್ದರೆ ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗುತ್ತಿತ್ತು. ಬಿಎಂಟಿಸಿಗೆ ಹೆಚ್ಚಿನ ಒತ್ತು ನೀಡುವುದರಿಂದ ಉತ್ತಮ ಆದಾಯದ ಜತೆಗೆ ಸಂಚಾರ ದಟ್ಟಣೆಯೂ ಕಡಿಮೆಯಾಗುತ್ತಿತ್ತು. ನಗರದ ಕೆಲವೆಡೆ ಸಮಯಕ್ಕೆ ಸರಿಯಾಗಿ ಬಸ್ ಸೇವೆಗಳು ಸಿಗದ ಹಿನ್ನೆಲೆಯಲ್ಲಿ ಜನರು ಸ್ವಂತ ವಾಹನದ ಮೊರೆ ಹೋಗುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಅಧಿಕವಾಗುತ್ತದೆ. ಮುಂಗಡ ಪತ್ರದಲ್ಲಿ್ಲ ಮೆಟ್ರೋಗೆ ಸೂಕ್ತ ಆದ್ಯತೆಗಳನ್ನು ನೀಡಲಾಗಿದೆ. ಇದರಿಂದ ದಿನನಿತ್ಯ ಓಡಾಡುವ ಜನರಿಗೆ ಅನುಕೂಲವಾಗಲಿದೆ. ಒಂದು ಯೋಜನೆಗಳನ್ನು ರೂಪಿಸುವ ಮೊದಲು ಅದರಿಂದ ಎಷ್ಟು ಪ್ರಮಾಣದಲ್ಲಿ ಆದಾಯ ಬರುತ್ತದೆ ಎಂಬುದನ್ನೂ ಗಮನಿಸಬೇಕು. ಅಲ್ಲದೆ, ಒಂದು ಯೋಜನೆಯನ್ನು ವಾಸ್ತವವಾಗಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂಬ

ಬಗ್ಗೆ ಚಿಂತಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು. ಅನುಷ್ಠಾನಕ್ಕೆ ಬರುವ ಎಲ್ಲ ಯೋಜನೆಗಳೂ ಸೂಕ್ತ ರೀತಿಯಲ್ಲಿ ಕಾರ್ಯರೂಪಕ್ಕೆ ಬರುವುದಿಲ್ಲ. ಸಿಲ್ಕ್​ಬೋರ್ಡ್ ಜಂಕ್ಷನ್​ನಿಂದ ಕೆ.ಆರ್.ಪುರಂ ಹಾಗೂ ಹೆಬ್ಬಾಳ ಮುಖಾಂತರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 56 ಕಿ.ಮೀ. ಹೊರ ವರ್ತಲ ರಸ್ತೆ- ಏರ್​ಪೋರ್ಟ್ ಮೆಟ್ರೋ ನಿರ್ವಣವನ್ನು ಪ್ರಾರಂಭಿಸಲು ಸರ್ಕಾರ ಮುಂದಾಗಿದೆ. ಅಲ್ಲದೆ, ಹೊಸ ಮೆಟ್ರೋ ಮಾರ್ಗಗಳನ್ನು ಆರಂಭಿಸಲು ಕೂಡ ಸರ್ಕಾರ ಯೋಚಿಸಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಅನುದಾನಗಳು ಬರುವುದಿಲ್ಲ. ಅಷ್ಟೇ ಅಲ್ಲದೆ ಕೆಲ ವರ್ಷಗಳ ಬಳಿಕ ಹೊಸ ಮಾರ್ಗಗಳು ಹಾಳಾದಾಗ ಅದನ್ನು ಸರಿಪಡಿಸಲು ಮತ್ತೆ ಹಣ ವ್ಯಯಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಹೊಸ ಮಾರ್ಗಗಳನ್ನು ನಿರ್ವಿುಸುವ ಮೊದಲು ಈ ಆಯಾಮದಲ್ಲೂ ಚಿಂತಿಸುವ ಅಗತ್ಯವಿದೆ.

| ವಿ. ರವಿಚಂದರ್, ನಗರ ಯೋಜನೆ ತಜ್ಞ

ತ್ಯಾಜ್ಯ ನೀರು ಸಂಸ್ಕರಣೆಗೆ 999 ಕೋಟಿ ರೂ. ಸೇರಿ ಬೆಂಗಳೂರು ಅಭಿವೃದ್ಧಿಗೆ ಒಟ್ಟು 8,772 ಕೋಟಿ ರೂ. ಮೀಸಲಿಟ್ಟಿರುವುದು ಸ್ವಾಗತಾರ್ಹ. ಮೆಟ್ರೋಪಾಲಿಟನ್ ಯೋಜನಾ ಸಮಿತಿ ಬಲಪಡಿಸಬೇಕು. ಇಲ್ಲವಾದರೆ ಬಿಬಿಎಂಪಿ ಹೊಸ ರಸ್ತೆ ಹಾಕಿದರೆ, ಮರುದಿನ ಜಲಮಂಡಳಿ ಕಾರ್ವಿುಕರು ಅಗೆಯುತ್ತಾರೆ. | ಹರೀಶ್​ಕುಮಾರ್ ನಮ್ಮ ಬೆಂಗಳೂರು ಪ್ರತಿಷ್ಠಾನದ ಸಂಸ್ಥಾಪಕ ವ್ಯವಸ್ಥಾಪಕ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಮೂಲಕ ಉದ್ದಿಮೆಗಳ ಆರಂಭಕ್ಕೆ ಸರಳ ವ್ಯವಸ್ಥೆ ಮಾಡಲಾಗಿದೆ. ಕೌಶಲ ಕರ್ನಾಟಕ ಅಡಿ ತರಬೇತಿ ಪಡೆವ ಯುವಕರಿಗೆ ವಸತಿ ಸೌಲಭ್ಯ ನೀಡಲಾಗುತ್ತಿದೆ. ಒಟ್ಟಾರೆ ಸಣ್ಣ ಕೈಗಾರಿಕೆಗಳಿಗೆ ಸರ್ಕಾರ ಹಲವು ಸೌಲಭ್ಯ ನೀಡಿದೆ. | ಆರ್. ರಾಜು ಕಾಸಿಯಾ ಅಧ್ಯಕ್ಷ ಕೃಷಿ, ಜಲ ಸಂಪನ್ಮೂಲ, ನೀರಾವರಿ ಮತ್ತು ಕೈಗಾರಿಕಾ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸುವುದು ಉತ್ತಮ ಬೆಳವಣಿಗೆ. ರಾಜ್ಯದ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 109ರ ತಿದ್ದುಪಡಿಯ ಘೊಷಣೆಯು ಕರ್ನಾಟಕದಲ್ಲಿ ವ್ಯವಹಾರವನ್ನು ಸುಲಭಗೊಳಿಸುತ್ತದೆ. ಹಲವು ಉಪಕ್ರಮಗಳನ್ನು ಘೊಷಿಸುವ ಮೂಲಕ ಸಾಮಾಜಿಕ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಗಮನಹರಿಸಿದೆ. | ಸಂದೀಪ್ ಸಿಂಗ್ ಸಿಐಐ ಅಧ್ಯಕ್ಷ ರಿಂಗ್ ರಸ್ತೆಯ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳು ಸಹಕಾರಿಯಾಗಿವೆ. ಸ್ಮಾರ್ಟ್ ಉತ್ಪಾದನೆ, ರಕ್ಷಣಾ ಮತ್ತು ಏರೋಸ್ಪೇಸ್ ಸಲಕರಣೆ ಉತ್ಪಾದನಾ ಕ್ಲಸ್ಟರ್​ಗಾಗಿ ಬೆಂಗಳೂರು ಕೇಂದ್ರವನ್ನು ಸ್ಥಾಪಿಸುವ ಯೋಜನೆಯು ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಲಿದೆ. | ರಮೇಶ್ ರಾಮುದರೈ 3ಎಂ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net