

ಧಾರವಾಡ: ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕು ಸೇರಿದಂತೆ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸಕ್ತ ಮುಂಗಾರು ಮಳೆಯಿಂದ ಅಂದಾಜು 55 ಸಾವಿರ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಹಾಳಾಗಿದ್ದು ರೈತರಿಗೆ ಬೆಳೆಹಾನಿ ಮಂಜೂರಾತಿಗಾಗಿ ತಕ್ಷಣ ಸರ್ಕಾರಕ್ಕೆ ವರದಿ ಸಲ್ಲಿಸಲು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋμï ಲಾಡ್ ಅಧಿಕಾರಿಕಾರಿಗಳಿಗೆ ಸೂಚಿಸಿದರು.
ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಮಾತನಾಡಿದರು.
ಅವರು ನರಗುಂದ-ಗದಗ ರಾಜ್ಯ ಹೆದ್ದಾರಿಯ ನವಲಗುಂದ ತಾಲ್ಲೂಕಿನ ತಡಹಾಳ ಹತ್ತಿರ ಇರುವ ದೊಡ್ಡಹಳ್ಳ ಹಾಗೂ ಬೆಣ್ಣೆಹಳ್ಳ ಸೇತುವೆ ಕೊಚ್ಚಿಹೋದದ್ದನ್ನು ವೀಕ್ಷಿಸಿದ ಕೂಡಲೇ ವಿಶೇಷ ತಜ್ಞರ ಜೊತೆ ಚರ್ಚಿಸಿ ಸ್ಟೀಲ್ ಬ್ರಿಡ್ಜ್ ಅಥವಾ ನೂತನ ಸೇತುವೆ ನಿರ್ಮಿಸಲು ಈಗಾಗಲೇ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಜೊತೆ ಚರ್ಚಿಸಿದ್ದು ತಕ್ಷಣ ವರದಿ ನೀಡಿ ಸರ್ಕಾರದಿಂದ ಮಂಜೂರಾತಿ ಪಡೆಯಬೇಕು ಎಂದು ಹೇಳಿದರು. ತಜ್ಞರ ಅಭಿಪ್ರಾಯದ ನಂತರ ಸೇತುವೆ ದುರಸ್ಥಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ಅವರು ಸೂಚಿಸಿದರು.
ನವಲಗುಂದ ನಗರದ ಹುಗ್ಗಿ ಓಣಿಯ ಮನೆ ಬಿದ್ದ ತರುವಾಯ ದ್ಯಾಮವ್ವ ಬನ್ನೆಣ್ಣವರ, ಹಾಗೂ ಕಳ್ಳಿಮಠ ಮೆಹಬೂಬ ನಗರದ ಮೋದಿನಸಾಬ ಶಿರಕೋಳ ಅವರುಗಳಿಗೆ ತಲಾ 25 ಸಾವಿರ ವೈಯಕ್ತಿಕ ಪರಿಹಾರ ಹಾಗೂ ಸರ್ಕಾರದಿಂದ 1 ಲಕ್ಷ 20 ಸಾವಿರ ಪರಿಹಾರ ನೀಡಲು ತಿಳಿಸಿದರು. ಶಲವಡಿ ನಾಯಕನೂರ ಗ್ರಾಮದ ನಡುವೆ ಜಮೀನಿನಲ್ಲಿ ಹೆಸರು ಹಾಗೂ ಈರುಳ್ಳಿ ಬೆಳೆ ಹಾನಿಯಾಗಿದ್ದನ್ನು ವೀಕ್ಷಿಸಿದರು .
ಅಣ್ಣಿಗೇರಿ ತಾಲ್ಲೂಕಿನ ಶಿಶ್ವಿನಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಮನೆ ಕುಸಿದು ಹಾನಿಯಾದ ಮನೆಗೆ ಭೇಟಿ ನೀಡಿ 25 ಸಾವಿರ ವೈಯಕ್ತಿಕ ಪರಿಹಾರ ಹಾಗೂ ಸರ್ಕಾರದಿಂದ 1 ಲಕ್ಷ 20 ಸಾವಿರ ಪರಿಹಾರ ನೀಡಲು ಕಂದಾಯ ಅಧಿಕಾರಿಗಳಿಗೆ ಹೇಳಿದರು. ಈಗಾಗಲೇ ಮನೆ ಕುಸಿತದಲ್ಲಿ ಸಿಲುಕಿದ 4 ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ತಿಳಿಸಿದರು.
ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿ ಕ್ರಾಸ್ ಹತ್ತಿರ ಶಿರಗುಪ್ಪಿ ಗ್ರಾಮದ ನಿಂಗವ್ವ ತೊಗರಿಮನಿ ಅವರ ಹೊಲದಲ್ಲಿ ಹೆಸರು ಬೆಳೆ ಹಾನಿಯಾಗಿದ್ದನ್ನು ವೀಕ್ಷಣೆ ಮಾಡಿ ಸರ್ಕಾರಕ್ಕೆ ತಕ್ಷಣ ವರದಿ ಮಾಡಿ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ, ಕುಂದಗೋಳ ಕ್ಷೇತ್ರದ ಶಾಸಕ ಎಂ.ಆರ್. ಪಾಟೀಲ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೆÇಲೀಸ್ ವರಿμÁ್ಠಧಿಕಾರಿ ಗುಂಜನ್ ಆರ್ಯ, ಹೆಚ್ಚುವರಿ ಐಎಎಸ್ ಅಧಿಕಾರಿ ರಿತಿಕಾ ಶರ್ಮಾ, ಉಪವಿಭಾಗಾಧಿಕಾರಿ ಶಲಾಂ ಹುಸೇನ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಪಂಚಾಯತ ರಾಜ್ ಇಂಜನೀಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಆರ್.ಎಂ.ಸೊಪ್ಪಿಮಠ, ಗ್ರಾಮೀಣ ಕುಡಿಯುವ ನೀರು ಇಲಾಖೆ ಇಇ ಜಗದೀಶ ಪಾಟೀಲ, ತಹಶೀಲ್ದಾರಗಳಾದ ಸುಧೀರ ಸಾವಕಾರ, ಮಂಜುನಾಥ ದಾಸಪ್ಪನವರ, ಜೆ.ಬಿ.ಮಜ್ಜಗಿ, ಸಿಪಿಐ ರವಿ ಕಪ್ಪತನವರ, ಮುರಗೇಶ ಚನ್ನಣ್ಣವರ, ಸಹಾಯಕ ಕೃಷಿ ನಿರ್ದೇಶಕ ರವೀಂದ್ರಗೌಡ ಪಾಟೀಲ, ಮಂಜುಳಾ ತೆಂಬದ, ಲೋಕೋಪಯೋಗಿ ಇಇ ವಿಜಯಕುಮಾರ, ಎಇಇ ಸೋಮನಗೌಡ ಪಾಟೀಲ, ಸುಧಾಕರ ಕಟ್ಟಿಮನಿ, ತಾಲ್ಲುಕು ಪಂಚಾಯತ ಇ.ಓ. ಭಾಗ್ಯಶ್ರೀ ಜಾಗೀರದಾರ, ರಾಮಚಂದ್ರ ಹೊಸಮನಿ, ಪಿ.ಆರ್. ಬಡೇಖಾನ, ನವಲಗುಂದ ತಾಲ್ಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಹುಬ್ಬಳ್ಳಿ ತಾಲ್ಲೂಕು ಅಧ್ಯಕ್ಷ ಶಿವಾನಂದ ಭೂಮಣ್ಣವರ, ಮಲಪ್ರಭಾ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ನವಲಗುಂದ ಕೃಷಿಕ ಸಮಾಜದ ಅಧ್ಯಕ್ಷ ಎಸ್.ವಿ. ಬಳಿಗೇರ, ಅಣ್ಣಿಗೇರಿ ಅಧ್ಯಕ್ಷ ಎ.ಪಿ. ಗುರಿಕಾರ, ಸದಸ್ಯರುಗಳಾದ ದಾವಲಸಾಬ ಖುದ್ದಣ್ಣವರ, ಹನಮಂತ ಕಂಬಳಿ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸದಸ್ಯರುಗಳಾದ ಜೀವನ ಪವಾರ, ಮೋದಿನಸಾಬ ಶಿರೂರ, ಮಂಜು ಜಾಧವ, ಹುಸೇನಬಿ ಧಾರವಾಡ ಇದ್ದರು.
ರೈತ ಹೋರಾಟಗಾರರಾದ ಲೋಕನಾಥ ಹೆಬಸೂರ, ಶಂಕರ ಅಂಬಲಿ, ರಘುನಾಥ ನಡುವಿನಮನಿ, ಡಿ.ಕೆ. ಹಳ್ಳದ, ಶ್ರೀನಿವಾಸ ಬೂದಿಹಾಳ, ಶಿವಣ್ಣ ಹುಬ್ಬಳ್ಳಿ, ಡಾ. ತಾಜುದ್ದೀನ ಕಾಗದ, ಮಹಾಬಳೇಶ ಅಣ್ಣಿಗೇರಿ, ಮುಂತಾದ ರೈತ ಮುಖಂಡರುಗಳು ಬೆಳೆ ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.