

ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಈ ಸಲದ ಬಜೆಟ್ನಲ್ಲಿ ಹೆಚ್ಚಿನಂಶ ಹೊಸದು ಇಲ್ಲದಿದ್ದರೂ ಇರುವ ಕೆಲವು ಅಂಶಗಳು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಾಮುಖ್ಯ ನೀಡಿವೆ. ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳಿಗೆ ಸಂಭ್ರಮ ಶನಿವಾರ ಎಂಬ ಪರಿಕಲ್ಪನೆ ಉತ್ತಮವಾಗಿದೆ.
ಈ ವರ್ಷ ಪ್ರಾಥಮಿಕ ಶಿಕ್ಷಣದಲ್ಲಿ ಹೊಸದಾಗಿ ಮತ್ತಷ್ಟು ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಅನುಮತಿ ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ -ಠಿ; 700 ಕೋಟಿ ನಬಾರ್ಡ್ ಮೂಲಕ ಬಿಡುಗಡೆ ಮಾಡಿಸಲು ಮುಂದಾಗಿರುವುದು ಶಾಲೆಯಲ್ಲಿ ಮೂಲಸೌಕರ್ಯ ಕಲ್ಪಿಸಲು ಸಹಾಯ ಮಾಡಲಿದೆೆ. ಎಲ್ಲರಿಗೂ ಉನ್ನತ ಶಿಕ್ಷಣ ದೊರೆಯಬೇಕೆಂದು
ಈ ರೀತಿ ತರಬೇತಿ ನೀಡಿದರೆ ಅಂತಹ ಬೋಧಕರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಅನುಕೂಲವಾಗುತ್ತದೆ. ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಇನ್ನೂ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಬಹುದಿತ್ತು. ಸರ್ಕಾರದಿಂದಲೇ ಉದ್ಯೋಗ ಮೇಳಗಳನ್ನು ಆಯೋಜಿಸಿ ಬಡ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸುವ ಸೌಲಭ್ಯ ಮಾಡಬೇಕು.
| ಜ್ಯೋತಿ ವಿಜಯ್ ಶಿಕ್ಷಣ ತಜ್ಞೆ