ವೈದ್ಯಕೀಯ, ಎಂಜಿನಿಯರಿಂಗ್, ಶಿಕ್ಷಣ, ಉದ್ಯಮ ಹಾಗೂ ಹಣಕಾಸು ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಗಣ್ಯ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಿಎ ಎಸ್. ಎಸ್. ನಾಯಕ್, ಸಿಎ ಶ್ರೀನಿವಾಸ್ ಕಾಮತ್, ಡಾ. ಜೋಸ್ಟಲ್ ಪಿಂಟೋ, ಮಹೇಶ್ ಕಾಮತ್, ವಿನೋದ್ ಎ. ಆರ್. ಪಿಂಟೋ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಹಾಗೂ ಹಳೇ ವಿದ್ಯಾರ್ಥಿನಿಯೂ ಆಗಿರುವ ದೀಪಿಕಾ ಎ. ನಾಯಕ್ ಮತ್ತು ಟ್ರಸ್ಟಿ ಉಸ್ತಾದ್ ರಫೀಕ್ ಖಾನ್ ಉಪಸ್ಥಿತರಿದ್ದರು.