

ಅಥಣಿ ಗ್ರಾಮೀಣ: ಹೊಸ ಶಿಕ್ಷಣ ನೀತಿಯ ಮುಖ್ಯ ಆಶಯಗಳಲ್ಲಿ ಕಲಿಕಾ ಹಬ್ಬವೂ ಒಂದಾಗಿದೆ ಎಂದು ಮುಖಂಡ ಮಾಯಪ್ಪ ಅಜ್ಜಣಗಿ ಹೇಳಿದರು.
ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಆಡು, ಮತ್ತು ಹಾಡು, ಕಾಗದ ಕತ್ತರಿ, ಬಣ್ಣ, ಮಾಡು-ಆಡು ಹಾಗೂ ಊರು ಸುತ್ತೋಣ ಎಂಬ ನಾಲ್ಕು ವಿಭಾಗಗಳಲ್ಲಿ ಚಟುವಟಿಕೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಅರ್ದಾವೂರ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಭವ ಮೂಲಕ ಕಲಿಕೆ ಸಾಧ್ಯ ಎಂದರು. ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ತೊಡಗಿಕೊಂಡು ಸಂಭ್ರಮಿಸಿದರು.
ಮುಖ್ಯ ಶಿಕ್ಷಕ ಸುಖದೇವ ಬಿದರಿ, ತಾಲೂಕು ಶಿಕ್ಷಣ ಸಂಯೋಜಕ ಸಾವಂತ ಗಸ್ತಿ, ಕಿಟ್ಟಪ್ಪ ದತ್ತುಬಾಗೋಳ, ಪರಪ್ಪ ಮಾಳಿ, ಹನುಮಂತ ಕುರಣಿ, ಬಸಪ್ಪ ಮಾಳಿ, ವಲಯ ಸಂಪನ್ಮೂಲ ವ್ಯಕ್ತಿ ವಿ.ಎಸ್.ಕನಾಳ, ಈರಪ್ಪ ಜಂಬಗಿ, ಬೀರಪ್ಪ ಸನದಿ ಇತರರಿದ್ದರು. ದುಂಡಪ್ಪ ದೊಡಮನಿ ಸ್ವಾಗತಿಸಿದರು. ಸುರೇಶ ಪಂಗಣ್ಣವರ ನಿರೂಪಿಸಿದರು.