ದುಬಾರಿ ಶುಲ್ಕ ವಸೂಲಿ ದಂಧೆ ನಿಯಂತ್ರಿಸಿ: ರೈತ ಮುಖಂಡ ಕಿರಂಗೂರು ಪಾಪು ಆಗ್ರಹ

Demand for crop compensation mandya
Published on

ಮಂಡ್ಯ: ದುಬಾರಿ ಶುಲ್ಕ ನಿಯಂತ್ರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿರುವ ಸಮಿತಿ, ಶಿಕ್ಷಣ ಇಲಾಖೆ ಕಾಯ್ದೆಗಳ ಮಾರ್ಗಸೂಚಿ ಸುತ್ತೋಲೆ ಪರಿಪಾಲನೆ ಮಾಡಬೇಕೆಂದು ಖಾಸಗಿ ಶಾಲೆಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕೆಂದು ರೈತ ಸಂಘದ ಮುಖಂಡ ಕಿರಂಗೂರು ಪಾಪು ಆಗ್ರಹಿಸಿದ್ದಾರೆ.

ಜಿಲ್ಲೆಗಳಲ್ಲಿ ಕೆಲ ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಯ ಅನುಮತಿ ಪಡೆಯದೇ ಪ್ರೀ ಕೆಜಿ, ಎಲ್‌ಕೆಜಿ, ಯುಕೆಜಿ ತೆರೆದಿವೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸುವ ಶಾಲೆಗಳನ್ನು ಪತ್ತೆ ಮಾಡಲು ತಂಡ ರಚನೆ ಮಾಡಬೇಕು. ಮಾತ್ರವಲ್ಲದೆ ಬಟ್ಟೆ, ಬ್ಯಾಗ್, ಪುಸ್ತಕ, ವಾಹನ ಶುಲ್ಕದ ಬಗ್ಗೆ ಸುತ್ತೋಲೆ ಪಾಲನೆ ಮಾಡುತ್ತಿರುವ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಅಂತೆಯೇ ಕೆಲ ಸಂಸ್ಥೆಯಲ್ಲಿ ವಸೂಲಿ ದಂಧೆಯೊಂದೇ ಕಾಯಕ ಮಾಡಿಕೊಂಡಿವೆ. ಆದ್ದರಿಂದ ಸರ್ಕಾರ ದುಬಾರಿ ಶುಲ್ಕವನ್ನು ಇಳಿಕೆ ಮಾಡಬೇಕೆಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net