ಕಂದಾಯ ಇಲಾಖೆ ಪ್ರಕರಣಗಳ ತ್ವರಿತ ವಿಲೇವಾರಿ

29 Dwd 6 (Gurudatta Hegde)
Published on

ಧಾರವಾಡ: ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಕಂದಾಯ ಇಲಾಖೆಯಲ್ಲಿ ಕಳೆದ ೬ ತಿಂಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ವಿವಿಧ ಪ್ರಕಟಣಗಳ ವಿಲೇವಾರಿ ಮಾಡಲಾಗುತ್ತಿದೆ ಎಂದು ಜಿಲ್ಲಾಽಕಾರಿ ಗುರುದತ್ತ ಹೆಗಡೆ ಹೇಳಿದರು.
ತಮ್ಮ ಕಚೇರಿಯ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ನ್ಯಾಯಾಲಯದ ಪ್ರಕರಣಗಳ ಇತ್ಯರ್ಥ, ಭೂಮಿ ಮ್ಯುಟೇಶನ್, ಭೂಮಿ ತಂತ್ರಾAಶ, ಪೈಕಿ ಪಹಣಿ ಪೋಡಿ, ಇ- ಆಫೀಸ್, ಭೂ ಸರ್ವೇ ನೋಂದಣಿ ಮುಂತಾದ ವಿಭಾಗಗಳಲ್ಲಿ ಬದಲಾವಣೆಗಳಾಗಿವೆ ಎಂದರು.
ತಹಸೀಲ್ದಾರರ ನ್ಯಾಯಾಲಯಗಳಲ್ಲಿ ಒಂದು ವರ್ಷ ಮೇಲ್ಪಟ್ಟು ಬಾಕಿ ಇದ್ದ ಕಂದಾಯ ನ್ಯಾಯಾಲಯ ಪ್ರಕರಣಗಳನ್ನು ವಿಲೇವಾರಿಗೊಳಿಸಲಾಗಿದೆ. ಭೂಮಿ ತಂತ್ರಾAಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜಮೀನುಗಳ ಪರಭಾರೆ ಕಾಯ್ದೆ, ಸರ್ಕಾರಿ ಜಮೀನುಗಳ ವಿವರಗಳನ್ನು ಗೇಣಿ ಮತ್ತು ಪಹಣಿ ಪತ್ರಿಕೆಗಳಲ್ಲಿ ದಾಖಲಿಸಲು ಕ್ರಮ ಕೈಕೊಳ್ಳಲಾಗಿದೆ. ಇ ಆಫೀಸ್ ಆನ್‌ಲೈನ್ ತಂತ್ರಾAಶದಿAದಾಗಿ ಪ್ರತಿನಿತ್ಯ ಕಚೇರಿಗೆ ಸ್ವೀಕೃತವಾಗುವ ಎಲ್ಲ ಪತ್ರಗಳನ್ನು ಇ ಆಫೀಸ್ ಮೂಲಕ ಸ್ವೀಕೃತಿ ಹಾಗೂ ವಿಲೇವಾರಿ ಮಾಡಲಾಗುತ್ತಿದೆ. ಅಟಲ್‌ಜಿ ಜನಸ್ನೇಹಿ ಕೇಂದ್ರದ ಮುಖಾಂತರ ೪೨ ಸೇವೆಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಯ ವಿಲೇವಾರಿ ಮಾಹಿತಿ, ಪ್ರಮಾಣಪತ್ರಗಳನ್ನು ಪಿ.ಡಿ.ಎಫ್. ಮುಖಾಂತರ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮದ ಮೂಲಕ ಈವರೆಗೆ ಒಟ್ಟು ೬೪೮ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಜಿಲ್ಲೆಯಲ್ಲಿ ಗುರುತಿಸಿದ ೧೮ ಕಂದಾಯ ಗ್ರಾಮಗಳಲ್ಲಿ ಈಗಾಗಲೇ ೧೦ ಗ್ರಾಮಗಳಿಗೆ ಅಂತಿಮ ಅಽಸೂಚನೆ ಹೊರಡಿಸಲಾಗಿದೆ. ಅಽಸೂಚನೆಯಾಗಿರುವ ಗ್ರಾಮಗಳ ಪೈಕಿ ೧,೦೦೧ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net