ಚುರುಕುಗೊಂಡ ಕೃಷಿ ಚಟುವಟಿಕೆ, ವಾಡಿಕೆಗಿಂತ ಹೆಚ್ಚಿನ ಮಳೆ, ರೈತರ ಮೊಗದಲ್ಲಿ ಮಂದಹಾಸ

03-Manjunath-HSK-001
Published on

ಹೊಸಕೋಟೆ: ತಾಲೂಕಿನಲ್ಲಿ ಮೇ ಅಂತ್ಯದವರೆಗೆ ಸುರಿದ ಮಳೆ ವಾಡಿಕೆಗಿಂತ ಶೇ.40 ಹೆಚ್ಚು ಮಳೆ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಮೇ ತಿಂಗಳವರೆಗೆ ಸುಮಾರು 139 ಮಿಮೀ ಮಳೆಯಾಗಿದ್ದು, ತಾಲೂಕಿನಲ್ಲಿ ಸುಮಾರು 10,746 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಈ ಬಾರಿ ಮುಂಗಾರು ಕೃಷಿ ಆರಂಭಿಸುವ ಗುರಿ ಹೊಂದಲಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ಹಲಸಂದೆ, ತೊಗರಿ, ಭತ್ತ ಹಾಗೂ ರಾಗಿ ಬೀಜಗಳನ್ನು ವಿತರಣೆ ಮಾಡಲಾಗುತ್ತಿದ್ದು, ಈಗಾಗಲೇ 100 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ಅದರಲ್ಲಿ 10.05 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ವಿ.ನಾಗರಾಜ್ ತಿಳಿಸಿದ್ದಾರೆ.

ನೆರೇಗಾ ಯೋಜನೆಯಡಿ ರೈತರ ಜಮೀನಿನಲ್ಲಿ ಕೃಷಿಹೊಂಡ ಹಾಗೂ ಬದುಗಳ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡುವ ಯೋಜನೆಯೂ ಜಾರಿಯಲಿದ್ದು, ರೈತರಿಗೆ ಮಾಹಿತಿ ನೀಡಲಾಗಿದ್ದು ಇದರ ಪ್ರಯೋಜನೆ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ತೋಟಗಾರಿಗೆ ಇಲಾಖೆಯಿಂದ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಳಿಗೆ ಹನಿನೀರಾವರಿ ಪದ್ಧತಿ ಅನುಸರಿಸಿ ಹೆಚ್ಚಿನ ಬೆಳೆ ಬೆಳೆಯಲು ಅನುಕೂಲವಾಗುವಂತಹ ಯೋಜನೆ ಜಾರಿಯಲಿದೆ. ಹಾಗೆಯೇ ಸರ್ಕಾರದಿಂದ ವಿವಿಧ ಯೋಜ ಜಾರಿಯಲಿದ್ದು, ಮಾಹಿತಿಗೆ ಕಚೇರಿ ಸಂಪರ್ಕಿಸಲು ಕೊರಿದ್ದಾರೆ.

ಮೇ ತಿಂಗಳ ಕೊನೇ ವಾರದಲ್ಲಿ ಸುರಿದ ಮಳೆ ವಿವರ

ಹೊಸಕೋಟೆ: 64 ಮಿ.ಮೀ.

ಸೂಲಿಬೆಲೆ ಹೋಬಳಿ: 85 ಮಿ.ಮೀ.

ಜಡಿಗೇನಹಳ್ಳಿ: 102 ಮಿ.ಮೀ.

ಅನುಗೊಂಡನಹಳ್ಳಿ ಹೋಬಳಿ: 97 ಮಿ.ಮೀ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net