

ಮಂಡ್ಯ: ಜಿಲ್ಲೆಯಲ್ಲಿ ಅ.28ರಿಂದ ನ.1ರವರೆಗೆ ತುಂತುರು ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಅವಧಿಯಲ್ಲಿ ಗರಿಷ್ಠ 31 ಡಿಗ್ರಿ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ಟ್ ಉಷ್ಣಾಂಶವಿರಲಿದೆ. ಅಂತೆಯೇ ಗಾಳಿ ಪ್ರತಿ ಗಂಟೆಗೆ 2 ರಿಂದ 6 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ದೀರ್ಘಾವಧಿ ಹವಾಮಾನ ಮುನ್ಸೂಚನೆ ಪ್ರಕಾರ ನ.3ರಿಂದ 9ರವರೆಗೆ ಸರಾಸರಿ ಮಳೆಯಾಗುಬಹುದು ಎಂದು ಮಾಹಿತಿ ನೀಡಿದೆ.