

ಮಂಡ್ಯ: ಜಿಲ್ಲೆಯಲ್ಲಿ ಡಿ.16ರಿಂದ 20ರವರೆಗೆ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
16ರಂದು 1 ಮಿ.ಮೀ, 17ರಂದು 2 ಮಿ.ಮೀ, 18ರಂದು 10 ಮಿ.ಮೀ, 20ರಂದು 1 ಮಿ.ಮೀ ಮಳೆ ಬೀಳುವ ಸಂಭವವಿದೆ. ಈ ಅವಧಿಯಲ್ಲಿ ಗರಿಷ್ಟ 30 ಹಾಗೂ ಕನಿಷ್ಟ 17 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಅಂತೆಯೇ ಪ್ರತಿ ಗಂಟೆಗೆ 4 ರಿಂದ 6 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದೆಂದು ವರದಿ ನೀಡಿದೆ.