

ಮಂಡ್ಯ: ಜಿಲ್ಲೆಯಲ್ಲಿ ಆ.23ರಿಂದ 27ರವರೆಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮಾಹಿತಿ ನೀಡಿದೆ.
ಈ ಅವಧಿಯಲ್ಲಿ ಗರಿಷ್ಟ 31 ರಿಂದ 32 ಹಾಗೂ ಕನಿಷ್ಟ 20 ರಿಂದ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಪ್ರತಿ ಗಂಟೆಗೆ ಗಾಳಿ 4 ರಿಂದ 6 ಕಿ.ಮೀ ವೇಗದಲ್ಲಿ ಬೀಸುವ ಸಂಭವವಿದೆ ಎಂದು ತಿಳಿಸಿದೆ.