ಜೂ.19ರಿಂದ 23ರವರೆಗೆ ಸಾಧಾರಣ ಮಳೆ ನಿರೀಕ್ಷೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

rain
Published on

ಮಂಡ್ಯ: ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಮಾಹಿತಿಯಂತೆ ಜೂ.19ರಿಂದ 23ರವರೆಗೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದ ಜತೆಗೆ ತುಂತುರುವಿನಿಂದ ಕೂಡಿದ ಸಾಧಾರಣ ಮಳೆಯಾಗಲಿದೆ.

19ರಂದು 12 ಮಿ.ಮೀ, 20ರಂದು 4 ಮಿ.ಮೀ, 21ರಂದು 2 ಮಿ.ಮೀ, 22ರಂದು 10 ಮಿ.ಮೀ ಹಾಗೂ 23ರಂದು 16 ಮಿ.ಮೀ ಮಳೆಯಾಗಬಹುದು. ಈ ಅವಧಿಯಲ್ಲಿ ಗರಿಷ್ಟ 30.4 ರಿಂದ 34.3 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ 17.6 ರಿಂದ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಗಾಳಿ ಪ್ರತಿ ಗಂಟೆಗೆ 17 ರಿಂದ 19 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net