ಜಿಲ್ಲೆಯಲ್ಲಿ ಇಂದಿನಿಂದ ನ.12ರವರೆಗೆ ಮಳೆ ಸಾಧ್ಯತೆ: ಮಾಹಿತಿ ನೀಡಿದ ಭಾರತೀಯ ಹವಾಮಾನ ಇಲಾಖೆ

rain
Published on

ಮಂಡ್ಯ: ಜಿಲ್ಲೆಯಲ್ಲಿ ನ.8ರಿಂದ 12ರವರೆಗೆ ತುಂತುರುವಿನಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

8ರಂದು 18 ಮಿ.ಮೀ, 9ರಂದು 12 ಮಿ.ಮೀ, 10ರಂದು 11 ಮಿ.ಮೀ, 11ರಂದು 7ರಂದು ಮಳೆ ಬೀಳುವ ಸಂಭವವಿದೆ. ಈ ಅವಧಿಯಲ್ಲಿ ಗರಿಷ್ಟ 33 ಹಾಗೂ ಕನಿಷ್ಟ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಅಂತೆಯೇ ಪ್ರತಿ ಗಂಟೆಗೆ 4 ರಿಂದ 7 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದೆಂದು ವರದಿ ನೀಡಿದೆ.

ಇನ್ನು ಸೋಮವಾರ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದ್ದು, 37.3 ಮಿ.ಮೀ ಪ್ರಮಾಣ ದಾಖಲಾಗಿದೆ. ಮಂಡ್ಯ ತಾಲೂಕಿನಲ್ಲಿ 38.7 ಮಿ.ಮೀ, ಮದ್ದೂರಿನಲ್ಲಿ 10.2 ಮಿ.ಮೀ, ಮಳವಳ್ಳಿಯಲ್ಲಿ 16, ಕೆ.ಆರ್.ಪೇಟೆಯಲ್ಲಿ 45.7 ಮಿ.ಮೀ, ನಾಗಮಂಗಲದಲ್ಲಿ 54.4 ಮಿ.ಮೀ, ಶ್ರೀರಂಗಪಟ್ಟಣದಲ್ಲಿ 43.5 ಮಿ.ಮೀ ಹಾಗೂ ಪಾಂಡವಪುರ ತಾಲೂಕಿನಲ್ಲಿ 46.9 ಮಿ.ಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net