

ಹುಬ್ಬಳ್ಳಿ : ಎಸ್ಎಸ್ಎಸ್ ಹುಬ್ಬಳ್ಳಿ ರಾಮೇಶ್ವರಂ- ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರದ ಅವಧಿ ವಿಸ್ತರಿಸಲಾಗಿದೆ.
ಈ ವಿಶೇಷ ರೈಲು ತನ್ನ ಹಿಂದಿನ ನಿಗದಿತ ನಿಲ್ದಾಣವಾದ ರಾಮೇಶ್ವರಂ ಬದಲಿಗೆ ರಾಮನಾಥಪುರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ ಮತ್ತು ಅಲ್ಲಿಂದಲೇ ತನ್ನ ಹಿಮ್ಮುಖ ಪ್ರಯಾಣವನ್ನು ಪ್ರಾರಂಭಿಸಲಿದೆ. ಈ ರೈಲು ಈಗಿರುವ ಸಂಯೋಜನೆ, ಸಮಯ ಮತ್ತು ನಿಲುಗಡೆಗಳೊಂದಿಗೆ ಸಂಚಾರ ಮುಂದುವರೆಸಲಿದೆ.
ಜು. 26ರವರೆಗೆ ಸಂಚರಿಸಬೇಕಿದ್ದಎಸ್ಎಸ್ಎಸ್ ಹುಬ್ಬಳ್ಳಿ - ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು, ಈಗ ಆಗಷ್ಟ್ 9 ರಿಂದ 30 ರವರೆಗೆ ನಾಲ್ಕು ಹೆಚ್ಚುವರಿ ಟ್ರಿಪ್ಗಳಿಗೆ ವಿಸ್ತರಿಸಲಾಗಿದೆ. ಈ ರೈಲು ಈಗ ರಾಮೇಶ್ವರಂ ಬದಲು ರಾಮನಾಥಪುರಂನಲ್ಲಿ ಸಂಚಾರ ಮೊಟಕುಗೊಳಿಸಲಿದೆ.
ಜು. 27ರವರೆಗೆ ಸಂಚರಿಸಬೇಕಿದ್ದ ರಾಮೇಶ್ವರಂ - ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು, ಈಗ ಆಗಷ್ಟ್ 10 ರಿಂದ 31 ರವರೆಗೆ ನಾಲ್ಕು ಹೆಚ್ಚುವರಿ ಟ್ರಿಪ್ಗಳಿಗೆ ವಿಸ್ತರಿಸಲಾಗಿದೆ. ಈ ರೈಲು ರಾಮೇಶ್ವರಂ ಬದಲು ರಾಮನಾಥಪುರಂನಿಂದ ಸಂಚಾರ ಪ್ರಾರಂಭಿಸಲಿದೆ.