

ಹುಬ್ಬಳ್ಳಿ : ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಕೆಲವು ವಿಶೇಷ ರೈಲುಗಳ ಸಂಚಾರವನ್ನು ವಿಸ್ತರಿಸಲಾಗಿದೆ.
ಎಸ್ಎಸ್ಎಸ್ ಹುಬ್ಬಳ್ಳಿ-ಗೋಮತಿ ನಗರ ರೈಲು ಸಂಚಾರವನ್ನು ಜೂ. 15ರವರೆಗೆ, ಗೋಮತಿ ನಗರ - ಎಸ್ಎಸ್ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಜೂ. 18ರವರೆಗೆ, ಎಸ್ಎಸ್ಎಸ್ ಹುಬ್ಬಳ್ಳಿ- ಅಹ್ಮದಾಬಾದ್ ರೈಲು ಸಂಚಾರವನ್ನು ಜೂ. 16ರವರೆಗೆ, ಅಹ್ಮದಾಬಾದ್- ಎಸ್ಎಸ್ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಜೂ. 17ರವರೆಗೆ, ಎಸ್ಎಸ್ಎಸ್ ಹುಬ್ಬಳ್ಳಿ -ಮುಜಾಫರ್ ರೈಲು ಸಂಚಾರವನ್ನು ಜೂ. 11ರವರೆಗೆ, ಮುಜಾಫರ್ - ಎಸ್ಎಸ್ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಜೂ. 14ರವರೆಗೆ, ಎಸ್ಎಸ್ಎಸ್ ಹುಬ್ಬಳ್ಳಿ - ಯೋಗ ನಗರಿ ರಿಶಿಕೇಶ ರೈಲು ಸಂಚಾರವನ್ನು ಜೂ. 10ರವರೆಗೆ, ಯೋಗ ನಗರಿ ರಿಶಿಕೇಶ- ಎಸ್ಎಸ್ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಜೂ. 13ರವರೆಗೆ ವಿಸ್ತರಿಸಲಾಗಿದೆ.