ಜಾಗತಿಕ ಮಟ್ಟಕ್ಕೂ ‘ನಂದಿನಿ’ ವಿಸ್ತರಣೆ

mysore
Published on

ಮೈಸೂರು: ಕರ್ನಾಟಕ ಹಾಲು ಮಹಾಮಂಡಳದ(ಕೆಎಂಎಫ್) ‘ನಂದಿನಿ’ ಬ್ರಾೃಂಡ್ ಅನ್ನು ಜಾಗತಿಕ ಮಟ್ಟಕ್ಕೂ ವಿಸ್ತರಣೆ ಮಾಡಲಾಗುವುದು ಎಂದು ಮೈಮುಲ್ ಅಧ್ಯಕ್ಷ ಆರ್.ಚೆಲುವರಾಜು ತಿಳಿಸಿದರು.


ನಗರದ ಬನ್ನೂರು ರಸ್ತೆಂು ಚಾಮುಂಡೇಶ್ವರಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಮೈಮುಲ್) ನೌಕರರ ಕ್ಷೇವಾಭಿವೃದ್ಧಿ ಸಂಘ ಉದ್ಘಾಟಿಸಿ ವಾತನಾಡಿದರು.


ಪ್ರಸ್ತುತದಲ್ಲಿ ಕೆಎಂಎಫ್ ದೇಶದಲ್ಲಿಯೇ ಸಹಕಾರಿ ಹೈನು ಉದ್ಯಮದಲ್ಲಿ 2ನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಹಾಲು ಶೇಖರಣೆ ಹಾಗೂ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವುದು ಮಹಾಮಂಡಳಿಯ ಅತ್ಯಂತ ಮುಖ್ಯವಾದ ಕಾರ್ಯಚಟುವಟಿಕೆಯಾಗಿದ್ದು, ನಂದಿನಿ ಬ್ರಾೃಂಡ್ ಪರಿಶುದ್ಧ ಹಾಗೂ ತಾಜಾ ಹಾಲು ಮತ್ತು ಹಾಲಿನ ಉತ್ಪನ್ನಗಳಿಗಾಗಿ ಮನೆ ಮಾತಾಗಿದೆ ಎಂದರು
ನಂದಿನಿ ವಿವಿಧ ಉತ್ಪನ್ನಗಳು ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ದೊರೆಯುತ್ತಿದೆ. ದೆಹಲಿಯಲ್ಲೂ ಇದನ್ನು ವಾರಾಟ ಮಾಡಲಾಗುತ್ತಿದ್ದು, ‘ನಂದಿನಿ’ಯನ್ನು ಜಾಗತಿಕ ಬ್ರ್ಯಾಂಡ್ ಆಗಿಸಲು ರೂಪಿಸಲಾಗುವುದು ಎಂದರು.


ಮೈಮುಲ್ ಅಭಿವೃದ್ಧಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು ಬೆನ್ನೆಲುಬಾಗಿದ್ದಾರೆ. ಅವರ ಕಷ್ಟ ಸುಖದಲ್ಲಿ ಒಕ್ಕೂಟವು ಭಾಗಿಯಾಗಲಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಬೇಡಿಕೆ ಈಡೇರಿಸಲು ಒಕ್ಕೂಟವು ಶ್ರಮಿಸಲಿದೆ ಎಂದರು.
ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ವಾತನಾಡಿ, ಹಾಲು ಉತ್ಪಾದಕರು ಹಾಲು ಪೂರೈಕೆ ವಾಡದಿದ್ದರೆ ಮೈಮುಲ್ ಅಭಿವೃದ್ಧಿ ಅಸಾಧ್ಯ. ರೈತರು ಹಾಗೂ ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.


ಸಂಘದ ಅಧ್ಯಕ್ಷೆ ಆರ್.ಮಂಗಳಾ ವಾತನಾಡಿ, ಒಕ್ಕೂಟವು ಸಂಘಕ್ಕೆ ಕಚೇರಿ ಕಲ್ಪಿಸಬೇಕು. ಸಹಕಾರ ಸಂಘಗಳ ಸಿಬ್ಬಂದಿ ಪ್ರೋತ್ಸಾಹ ಧನವನ್ನು 50 ಪೈಸೆ ಹೆಚ್ಚಿಸಬೇಕು. ವಿಮೆ ಸೌಲಭ್ಯದ ಜತೆಗೆ ಅಕಾಲಿಕ ಮೃತಪಟ್ಟ ನೌಕರರಿಗೆ ಪರಿಹಾರ ನೀಡಬೇಕು. ಒಕ್ಕೂಟದ ಲಾಭದಲ್ಲಿ ಒಂದಂಶವನ್ನು ನೌಕರರಿಗೆ ಕೊಡಬೇಕು ಎಂದು ಕೋರಿದರು.


ಮೈಮುಲ್ ಅಧ್ಯಕ್ಷ ಆರ್.ಚೆಲುವರಾಜು ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಂಡಳಿ ಅಧ್ಯಕ್ಷ ಎಸ್.ಶಿವನಾಗಪ್ಪ, ಮೈಮುಲ್ ನಿರ್ದೇಶಕರಾದ ಕೆ.ಉವಾಶಂಕರ್, ಓಂಪ್ರಕಾಶ್, ಕೆ.ಜಿ.ಮಹೇಶ್, ಲೀಲಾ ಬಿ.ಕೆ.ನಾಗರಾಜ್, ಬಿ.ನೀಲಾಂಬಿಕೆ ಮಹೇಶ್, ಎ.ಶಿವಗಾಮಿ ಷಣ್ಮುಗಂ, ಮೈಮುಲ್ ವ್ಯವಸ್ಥಾಪಕ ಎಲ್.ಆರ್.ಕರಿಬಸವರಾಜು, ಉಪ ವ್ಯವಸ್ಥಾಪಕ ಜಿ.ಎನ್.ಸಂತೋಷ್, ಸಂಘದ ಗೌರವಾಧ್ಯಕ್ಷ ಸಿ.ಆರ್.ರವಿಕುವಾರ್, ಕಾಂರ್ುದರ್ಶಿ ವಿರೂಪಾಕ್ಷ, ಉಪಾಧ್ಯಕ್ಷರಾದ ಶೋಭಾಬಾಯಿ, ಬಿ.ಪಿ.ದಿನೇಶ್, ಎನ್.ಎಲ್.ನಂಜುಂಡಸ್ವಾಮಿ, ಬಿ.ಪಿ.ಜಗದೀಶ್ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net