ಜಿಲ್ಲಾದ್ಯಂತ ಮಹಾಗಾಂವ್ ಪತ್ತಿನ ಸಂಘ ವಿಸ್ತರಣೆ

PH 12
Published on

ಕಮಲಾಪುರ: ಮಹಾಗಾಂವ್‌ಗೆ ಸೀಮಿತವಾಗಿರುವ `ಮಹಾಗಾಂವ್ ಸೌಹಾರ್ದ ಪತ್ತಿನ ಸಹಕಾರಿ ಸಂಘ'ವನ್ನು ಜಿಲ್ಲಾದ್ಯಂತ ವಿಸ್ತರಿಸುವುದಾಗಿ ಸಂಘದ ಅಧ್ಯಕ್ಷ ವೈಜನಾಥ ತಡಕಲ್ ಘೋಷಿಸಿದರು.

ಮಹಾಗಾಂವ್ ಕ್ರಾಸ್‌ನಲ್ಲಿರುವ ಸಂಘದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಕಮಲಾಪುರ ಮತ್ತು ವಿಕೆ ಸಲಗರಗಳಲ್ಲಿ ಶಾಖೆ ಆರಂಭಿಸಲಾಗುವುದು. ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.

ಉಪಾಧ್ಯಕ್ಷ ವಿರೂಪಾಕ್ಷಪ್ಪ ಗುಂಡಪ್ಪಗೋಳ, ಪ್ರಮುಖರಾದ ಡಾ.ಶರಣು ಯಕ್ಕಂಚಿ, ಬಸವರಾಜ ಸಾತಖೇಡ, ಶ್ರೀಕಾಂತ ಪಾಟೀಲ್, ಅಣವೀರ ಗೌಡಪ್ಪಗೋಳ, ಅರುಣಕುಮಾರ ಏರಿ, ನಂದನಕುಮಾರ ಹರಸೂರಕರ, ಸುರೇಶ ಲೇಂಗಟಿ, ಜಗನ್ನಾಥ ರಟಕಲ್, ಮಹಾಂತೇಶ ಚೊಂಡಿ, ಗುಂಡಪ್ಪ ಲೆಂಡಿ, ನಾಗರಾಜ ಕಾಳಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net