ಸದ್ಭಾವನಾ ಪ್ರಶಸ್ತಿ ರಾಷ್ಟ್ರಮಟ್ಟಕ್ಕೆ ವಿಸ್ತರಣೆ

Expansion of Goodwill Award to National Level
ಮುದ್ದೇಬಿಹಾಳದಲ್ಲಿ ಯುವ ಸಂಟನೆಗಳ ಒಕ್ಕೂಟದ ರಾಜ್ಯಾಧ್ಯ ಡಾ. ಎಸ್​. ಬಾಲಾಜಿ ಅವರನ್ನು ರಾಜುಗೌಡ ತುಂಬಗಿ ಸನ್ಮಾನಿಸಿದರು. ಪುಂಡಲೀಕ ಮುರಾಳ, ವೀರೇಶ ಗುರುಮಠ, ಮಹ್ಮದ ರಫೀಕ ಶಿರೋಳ, ಶ್ರೀಕಾಂತ ಹಿರೇಮಠ, ದೀಪ ರತ್ನಶ್ರೀ, ಚಂದ್ರು ಕರೇಕಲ್​, ಅಪ್ಪುಗೌಡ ಪಾಟೀಲ, ಮಹಾಂತಗೌಡ ಬಿರಾದಾರ ಇದ್ದರು.
Published on

ಮುದ್ದೇಬಿಹಾಳ: ಸ್ವಾಮಿ ವಿವೇಕಾನಂದ ಜಯಂತಿ ಮತ್ತು ವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ವಿತರಣೆಯನ್ನು ಈ ಬಾರಿ ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್​, ಕರ್ನಾಟಕ ಯುವ ಸಂಟನೆಗಳ ಒಕ್ಕೂಟದ ರಾಜ್ಯಾಧ್ಯ ಡಾ. ಎಸ್​. ಬಾಲಾಜಿ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೆ.1 ರಂದು ಮುದ್ದೇಬಿಹಾಳದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಮುಂಚೆ ಕರ್ನಾಟಕದ 31 ಜಿಲ್ಲೆಯ ಸಾಧಕರಿಗೆ, ಎರಡು ಯುವಕ, ಯುವತಿ ಮಂಡಳಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗುತ್ತಿತ್ತು. ಈ ಬಾರಿ ಮಹಾರಾಷ್ಟ್ರ, ಮಧ್ಯಪ್ರದೇಶ, ತಮೀಳನಾಡು, ಕೇರಳ, ರಾಜಸ್ಥಾನ ರಾಜ್ಯಗಳ ಸಾಧಕರಿಗೂ ಪ್ರಶಸ್ತಿ ಕೊಡುತ್ತಿರುವುದರಿಂದ ಇದನ್ನು ರಾಷ್ಟ್ರಮಟ್ಟಕ್ಕೆ ವ್ಯಾಪಿಸುವ ಯೋಜನೆ ಕಾರ್ಯರೂಪಕ್ಕೆ ತಂದಿದ್ದೇವೆ ಎಂದರು.

ಕನ್ನಡ ಮತ್ತು ಸಂಸತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಲಿದ್ದು ಹಲವು ಗಣ್ಯರು ಭಾಗವಹಿಸುವರು. ಯುವಜನಸೇವೆ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಲವು ಸಾಧಕರನ್ನು ಗೌರವಿಸುವುದರ ಜತೆಗೆ ವಿವಿಧ ಕಲೆಗಳ ಪ್ರಸಾರಕ್ಕೂ ಆದ್ಯತೆ ನೀಡಲಾಗಿದೆ. ಈ ಬಾರಿ ಈ ಕಾರ್ಯಕ್ರಮವನ್ನು ಬಾಗಲಕೋಟೆ ಜಿಲ್ಲೆಯವರು ನಡೆಸಿಕೊಡಲು ಮುಂದೆ ಬಂದಿದ್ದರು. ಆದರೆ ಮುದ್ದೇಬಿಹಾಳದಲ್ಲಿ ಸಂಟನೆಯ ಅಚ್ಚುಕಟ್ಟುತನ, ಈಗಾಗಲೇ ರಾಜ್ಯಮಟ್ಟದಲ್ಲಿ ಈ ಊರು ಹೆಸರು ಮಾಡಿರುವುದರಿಂದ ಇಲ್ಲಿಯೇ ಈ ಬಾರಿಯೂ ಹಮ್ಮಿಕೊಳ್ಳಲು ತೀರ್ಮಾನಿಸಬೇಕಾಯಿತು ಎಂದರು.

ಇದೇ ವೇಳೆ ಯುವ ಸಂಗಳ ಒಕ್ಕೂಟದ ಮುದ್ದೇಬಿಹಾಳ ತಾಲೂಕು ಟಕಕ್ಕೆ ವೀರೇಶ ಗುರುಮಠ ಅವರನ್ನು ಅಧ್ಯರನ್ನಾಗಿ, ಕನ್ನಡ ಜಾನಪದ ಪರಿಷತ್​ನ ತಾಲೂಕು ಮಹಿಳಾ ಟಕಕ್ಕೆ ಅಧ್ಯರನ್ನಾಗಿ ದೀಪಾ ರತ್ನಶ್ರೀ, ಜಾನಪದ ಯುವ ಬ್ರಿಗೇಡ್​ ಸಮಿತಿಗೆ ಅಧ್ಯರಾಗಿ ರಾಹುಲ್​ ಪಿರಂಗಿ, ಸಂಚಾಲಕರಾಗಿ ಮುತ್ತು ಚಲವಾದಿ ಮತ್ತು ಎಲ್ಲ ಟಕಗಳಿಗೂ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಒಕ್ಕೂಟದ ಜಿಲ್ಲಾಧ್ಯ ಪುಂಡಲೀಕ ಮುರಾಳ, ವೀರೇಶ ಗುರುಮಠ, ಮಹ್ಮದರಫೀಕ ಶಿರೋಳ, ರಾಜುಗೌಡ ತುಂಬಗಿ, ಶ್ರೀಕಾಂತ ಹಿರೇಮಠ, ದೀಪ ರತ್ನಶ್ರೀ, ಚಂದ್ರು ಕರೇಕಲ್​, ಅಪ್ಪುಗೌಡ ಪಾಟೀಲ, ಮಹಾಂತಗೌಡ ಬಿರಾದಾರ, ಮಹಾಂತೇಶ ಬಿಜ್ಜೂರ, ಕಿರಣಗೌಡ ಪಾಟೀಲ, ದಾನಯ್ಯ ಹಿರೇಮಠ, ರಾಜು ವಾಲಿಕಾರ, ಮಲ್ಲು ಹುಡೇದ, ದಾನಯ್ಯ ಮಠ, ಬಸವರಾಜ ಹೊಕ್ರಾಣಿ, ಶಾರದಾ ಬಿದರಕುಂದಿ ಉಪಸ್ಥಿತರಿದ್ದರು.

ಡಾ. ಬಾಲಾಜಿ ಅವರನ್ನು ರಾಜುಗೌಡ ಅವರು ಸ್ನೇಹಿತರೊಡಗೂಡಿ ಸನ್ಮಾನಿಸಿದರು.

ರಾಜ್ಯದಲ್ಲಿ ಯುವ ನೀತಿ ಜಾರಿಯಾಗಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಈಡುತ್ತಿದ್ದೇವೆ. ಈಗ ನಮ್ಮವರೇ ಸಚಿವರಾಗಿದ್ದು ಈ ಬಾರಿ ನಮ್ಮ ಬೇಡಿಕೆ ಈಡೇರುವ ನಿರೀೆ ಇದೆ. > ಡಾ. ಎಸ್​. ಬಾಲಾಜಿ, ಅಧ್ಯ, ಯುವ ಸಂಟನೆಗಳ ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net