ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಗೆ ಜಾಗ ಪರಭಾರೆ, ಮಾಜಿ ಮೇಯರ್ ಪತ್ರಕ್ಕೆ ಟೀಕೆ

IMG-20250304-WA0010.jpg
Published on

ಹುಬ್ಬಳ್ಳಿ: ಕಾಂಗ್ರೆಸ್ ಕಚೇರಿಗೆ ಜಾಗ ಪರಭಾರೆ ವಿಚಾರದಲ್ಲಿ ಮಹಾನಗರ ಪಾಲಿಕೆಯ ಹಿಂದಿನ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಲು ಕೋರಿ ರಾಜ್ಯಪಾಲರಿಗೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಪತ್ರ ಬರೆದಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌರಿ ಟೀಕಿಸಿದ್ದಾರೆ.

ಪಾಲಿಕೆಯ ಸಭೆಯಲ್ಲಿ ಅದ ನಡಾವಳಿಗಳನ್ನೇ ಸರ್ಕಾರಕ್ಕೆ ಹಿಂದಿನ ಆಯುಕ್ತ ಉಳ್ಳಾಗಡ್ಡಿಯವರು ಕಳುಹಿಸಿದ್ದಾರೆ. ಯಾವುದೇ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಕಾಂಗ್ರೆಸ್ ಕಚೇರಿಗೆ ಕಾನುನು ಬದ್ಧವಾಗಿಯೇ ಜಾಗ ಮಂಜುರಾಗಿದೆ. ಯಾವುದೇ ಶಾಸಕರ ಹಾಗೂ ಸಚಿವರ ಒತ್ತಡವೂ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಈ ಜಾಗವನ್ನು ಕುಡಿಯುವ ನೀರಿನ ಸಂಗ್ರಹಗಾರಕ್ಕೆ ಬಳಸಲಾಗುತ್ತದೆ. ಸಾರ್ವಜನಿಕ ಆರೋಗ್ಯ ಮತ್ತು ಭದ್ರತೆಯ ಕಾರಣದಿಂದ ನಿರ್ಭಂದಿತ ಪ್ರದೇಶ ಎಂಬ ವಿಚಾರದಲ್ಲೂ ಹುರುಳಿಲ್ಲ. ಮಾಜಿ ಮೇಯರ್ ಈ ಹಿಂದೆ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬಿಜೆಪಿ ಆಡಳಿತವಿದ್ದಾಗ ಸಂಘ ಪರಿವಾರದ ನಾಮಕೆವಾಸ್ತೆ ಸಂಘಟನೆಗಳಿಗೆ ಪ್ರಮುಖ ಸ್ಥಳಗಳಲ್ಲಿ ನಾಗರಿಕ ಸೌಲಭ್ಯ ನಿವೇಶನ ಹಂಚಿಕೆಯಾಗಿದ್ದರ ಬಗ್ಗೆಯೂ ರಾಜ್ಯಪಾಲರಿಗೆ ಪತ್ರ ಬರೆದರೆ ಒಳ್ಳೆಯದು ಎಂದು ಗೌರಿ ಕುಟುಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net