

ಹುಬ್ಬಳ್ಳಿ: ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮೂವರು ರೌಡಿಶೀಟರ್‌ಗಳನ್ನು ಮೂರು ತಿಂಗಳವರೆಗೆ ಗಡಿಪಾರು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ ಆದೇಶ ಹೊರಡಿಸಿದೆ.
ಅಂಬಿಕಾನಗರದ ನಿವಾಸಿ ರೌಡಿಶೀಟರ್ ಆನಂದ ತಂದೆ ಗೋವಿಂದಪ್ಪ ಚವ್ಹಾಣ (42) ಎಂಬಾತನನ್ನು ಗದಗ ಶಹರ ಪೋಲಿಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು.
ಸೆಟ್ಲಮೆಂಟ್‌ನ ನಿವಾಸಿ ರೌಡಿಶೀಟರ್ ಚಂದ್ರು ಘಡಗಿ ಚಂದ್ರ್ಯಾ ತಂದೆ ಫಕ್ಕಿರಪ್ಪ ಕೊರವರ (37) ಎಂಬಾತನನ್ನು ಬೆಳಗಾವಿ ಜಿಲ್ಲೆಯ ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು.
ಧಾರವಾಡ ಹಾವೇರಿಪೇಟ ನಿವಾಸಿ ರೌಡಿಶೀಟರ್ ನಾಸೀರ ತಂದೆ ಮಲ್ಲಿಕಸಾಬ ಶೇಖ (38) ಎಂಬಾತನನ್ನು ಮೈಸೂರು ಜಿಲ್ಲೆಯ ನಂಜನಗೂಡು ಶಹರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು.