5ಲಕ್ಷ ರೂ.‌ಕಿಮ್ಮತ್ತಿನ ಗೋವಾ ಮದ್ಯ ಜಪ್ತಿ

IMG-20231202-WA0014.jpg
Published on

ಬೆಳಗಾವಿ:ನೆರೆಯ ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ಜಿಲ್ಲೆಯಲ್ಲಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಶನಿವಾರ ಅಬಕಾರಿ ಪೊಲೀಸರು ದಾಳಿ ನಡೆಸಿ ಇಬ್ಬರು ಬಂಽಸಿ ಐದು ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ ಮಾಡಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಬಹದ್ದೂರವಾಡಿಯ ಶಿವಾಜಿ ಗಲ್ಲಿಯ ನಾಗೇಶ ನಾರಾಯಣ ಪಾಟೀಲ(೩೪), ಸಾಹಿಲ್ ಲಕ್ಷಿ÷್ಮÃ ಪಾಟೀಲ(೧೯) ಬಂಽತರು.
ಶನಿವಾರ ಬೆಳ್ಳಂ ಬೆಳಗ್ಗೆ ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದಿಂದ ಕವಳೆವಾಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ರಸ್ತೆಗಾವಲು ಹಾಗೂ ವಾಹನ ತಪಾಸಣೆ ಮಾಡುತ್ತಿರುವಾಗ  ಅಶೋಕ ಲೆಲ್ಯಾಂಡ ಗೂಡ್ಸ್ ವಾಹನದ ಹಿಂದುಗಡೆ ಪಾರ್ಟಿಷನ್ ಮಾಡಿ ೯ ವಿವಿಧ ಕಂಪನಿಯ ೭೬೦ ಬಾಟಲಿಗಳಲ್ಲಿ ಒಟ್ಟು ೨೩೯.೪೦೦.ಲೀ ಗೋವಾ ಮದ್ಯವನ್ನು ಮುಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪತ್ತೆಯಾಗಿದೆ. ೫ ಲಕ್ಷ ರೂ. ಮೌಲ್ಯದ ಮದ್ಯ, ೩.೩೦ ಲಕ್ಷ ರೂ. ಕಿಮ್ಮತ್ತಿನ ವಾಹನ ಸೇರಿದಂತೆ  ಒಟ್ಟು ೮.೫೦ ಲಕ್ಷ ರೂ. ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜುನಾಥಣ, ಜಂಟಿ ಆಯುಕ್ತ ಫಿರೋಜಖಾನ್ ಕಿಲ್ಲೇದಾರ, ಉಪ ಆಯುಕ್ತ ವಣಜಾಕ್ಷಿ ಎಂ ಹಾಗೂ ಅಽÃಕ್ಷಕ ವಿಜಯಕುಮಾರ ಹಿರೇಮಠ ಮಾರ್ಗದರ್ಶನದಲ್ಲಿ  ಉಪಅಽÃಕ್ಷಕ ರವಿ ಎಂ .ಮುರಗೋಡ  ನೇತೃತ್ವದ  ಮಂಜುನಾಥ ಗಲಗಲಿ,  ಸುನೀಲ ಪಾಟೀಲ,  ಮಹಾದೇವಪ್ಪ ಕಟಗೆನ್ನವರ ತಂಡ ಕಾರ್ಯಚರಣೆ ನಡೆಸಿ ಅಕ್ರಮ ಮದ್ಯ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net