ಇಂದು ಛಾಯಾಚಿತ್ರಗಳ ಪ್ರದರ್ಶನ

Vijayavani-Featured-Image
Published on

ವಿಜಯಪುರ : ನಗರದ ಸ್ಟೇಷನ್​ ರಸ್ತೆಯ ಪ್ರವಾಸೋದ್ಯಮ ಇಲಾಖೆಯ ಸರ್ಕಾರಿ ಆರ್ಟ್​ ಗ್ಯಾಲರಿಯಲ್ಲಿ ಆ. 21 ರಂದು ಬೆಳಗ್ಗೆ 11 ಕ್ಕೆ ವಿಶ್ವ ಛಾಯಾಗ್ರಹಣ ದಿನಾಚರಣೆ ಹಿನ್ನೆಲೆಯಲ್ಲಿ ಛಾಯಾಗ್ರಹಣ ೇತ್ರದ ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

ಜಿಲ್ಲಾ ನೂತನ ಛಾಯಾಗ್ರಾಹಕರ ಸಂದ ಜಿಲ್ಲಾ ಟಕ ಹಾಗೂ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕಾರ್ಯಕ್ರಮ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಬಿಎಲ್​ಡಿಇ ವಿವಿಯ ಶಸಚಿಕಿತ್ಸಕ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದೀಪಕ್​ ಚವ್ಹಾಣ, ಸಂದ ನಿರ್ದೇಶಕ ನಾಗರಾಜ ಟಿ.ಸಿ., ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ ಆಗಮಿಸುವರು.

ಜಿಲ್ಲಾ ನೂತನ ಛಾಯಾಗ್ರಾಹಕರ ಸಂದ ಅಧ್ಯಕ್ಷ ರಮೇಶ ಚವ್ಹಾಣ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಂಗಲಿಬಾಷಾ ಮುಜಾವರ, ಸಂಗಯ್ಯ ಮಠಪತಿ, ಸಿದ್ದು ಕುದುರೆ, ಶಿವರುದ್ರಯ್ಯ ಹಿರೇಮಠ, ಪರಶುರಾಮ ಗುಳ್ಳೂರ, ರಾಜಣ್ಣ ಸಂಡೂರ, ಮಡಿವಾಳಪ್ಪ ಪಾಟೀಲ ಆಗಮಿಸುವರೆಂದು ಸಂದ ಕಾರ್ಯದರ್ಶಿ ಸತೀಶಕುಮಾರ ಕಲಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net