ಕಲಾಕೃತಿ ಮೂಲಕ ಇತಿಹಾಸ ಕಾಪಿಡುವುದು ಶ್ರೇಷ್ಠ ಕಾಯಕ

udp-17-aditi gallary
Published on

ಉಡುಪಿ: ಇತಿಹಾಸವನ್ನು ಚಿತ್ರಗಳ ಮೂಲಕ ಕಾಪಿಡುವುದು ಅತ್ಯಂತ ಶ್ರೇಷ್ಠ ಕಾಯಕ. ಮುಂದಿನ ಪೀಳಿಗೆಗೆ ಪ್ರಾಚಿನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಮಂಗಳೂರಿನ ಉದ್ಯಮಿ ನೇಮಿರಾಜ ಶೆಟ್ಟಿ ಅಭಿಪ್ರಾಯಪಟ್ಟರು.

ಶುಕ್ರವಾರ ಅದಿತಿ ಆರ್ಟ್​ ಗ್ಯಾಲರಿಯಲ್ಲಿ ಮೂರು ದಿನ ನಡೆಯುವ ಕಲ್ಲಚ್ಚು ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಲಾವಿದ ಡಾ. ಜನಾರ್ಧನ ಹಾವಂಜೆ ಮಾತನಾಡಿ, ಸಾಮಾಜಿಕ ಬದಲಾವಣೆಗಾಗಿ ದೇವರನ್ನು ಮನುಷ್ಯರೂಪದಲ್ಲಿ ತೋರಿಸಿದ ಕಲಾವಿದ ರವಿ ವಮಾರ್ ಅವರ ಕೊಡುಗೆ ಅಪಾರ. ಕಲ್ಲಚ್ಚು ಪ್ರತಿಗಳ ತಳಸ್ಪರ್ಶಿ ಅಧ್ಯಯನವಾಗಬೇಕು ಎಂದು ಹೇಳಿದರು.

ಅದಿತಿ ಗ್ಯಾಲರಿ ಆಡಳಿತ ವಿಶ್ವಸ್ಥ ಡಾ. ಕಿರಣ್​ ಆಚಾರ್ಯ ಪ್ರಸ್ತಾವಿಕವಾಗಿ ಮಾತನಾಡಿ, ಚಿತ್ರ ಕೃತಿಗಳ ನಿಮಾರ್ಣದ ಜತೆಗೆ ಕಲಾಕೃತಿಗಳು ಸಾಮಾನ್ಯರಿಗೂ ತಲುಪುವಂತೆ ಮಾಡುವುದು ಒಂದು ವಿಶಿಷ್ಟ ಕಲೆ. ಪ್ರಾಚಿನ ಕಾಲದ ಮುದ್ರಣ ತಂತ್ರಜ್ಞಾನವನ್ನು ಬಳಸಿ ಬಹು ಪ್ರತಿಗಳ ನಿಮಾರ್ಣ ಮಾಡಿದ ಅನೇಕ ಕಲಾವಿದರ ಸಾಲಿಗೆ ರವಿ ವರ್ಮ ಅವರೂ ಸೇರುತ್ತಾರೆ ಎಂದು ತಿಳಿಸಿದರು.

ವಿಶ್ವಸ್ಥರಾದ ವಿದುಷಿ ಪ್ರತಿಮಾ ಆಚಾರ್ಯ, ಶ್ರೀನಿವಾಸ್​, ಪ್ರಸನ್ನ ಶ್ರೀನಿವಾಸ್​, ವಿದುಷಿ ಪ್ರವಿಣಾ ಮೋಹನ್​ ಉಪಸ್ಥಿತರಿದ್ದರು. ಕಲಾ ಪ್ರದರ್ಶನವು ಮೇ 19 ರವರೆಗೆ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ ವೀಕ್ಷಣೆಗೆ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net