ಜ್ಞಾನದೀಪ ಯೋಜನೆಯಡಿ ಬೆಂಚ್, ಡೆಸ್ಕ್ ವಿತರಣೆ

1 SDP
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಯೋಜನೆಯಡಿ ಮಾಲ್ದಾರೆ ಸರ್ಕಾರಿ ಪ್ರಾಥಮಿಕ ಶಾಲೆಗೆ 5 ಬೆಂಚ್ ಮತ್ತು ಡೆಸ್ಕ್‌ಗಳನ್ನು ಶನಿವಾರ ವಿತರಿಸಲಾಯಿತು.
Published on

ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಯೋಜನೆಯಡಿ ಮಾಲ್ದಾರೆ ಸರ್ಕಾರಿ ಪ್ರಾಥಮಿಕ ಶಾಲೆಗೆ 5 ಬೆಂಚ್ ಮತ್ತು ಡೆಸ್ಕ್‌ಗಳನ್ನು ಶನಿವಾರ ವಿತರಿಸಲಾಯಿತು.

ಸಂಸ್ಥೆಯ ವಲಯ ಮೇಲ್ವಿಚಾರಕ ಪ್ರದೀಪ್ ಮಾತನಾಡಿ, ಸಂಸ್ಥೆಯು ವಿವಿಧಡೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರ ಭಾಗವಾಗಿ ಜ್ಞಾನದೀಪ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯಾದ್ಯಂತ ಕೊರತೆ ಇರುವ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಗೌರವ ಶಿಕ್ಷಕರ ಒದಗಿಸುವುದು ಮತ್ತು ಶಾಲಾ ಕಟ್ಟಡ ರಚನೆ, ಆವರಣ ರಚನೆ, ಆಟದ ಮೈದಾನ, ಶೌಚಗೃಹ, ದೊಡ್ಡಿಗಳ ರಚನೆ, ಶುದ್ಧ ಕುಡಿಯುವ ನೀರಿನ ಪೂರೈಕೆ, ಶಾಲಾ ಕಟ್ಟಡ ದುರಸ್ತಿ ಕ್ರೀಡಾ ಹಾಗೂ ಬೋಧನಾ ಸಾಮಗ್ರಿ ಪೂರೈಕೆ ಮತ್ತು ಡೆಸ್ಕ್, ಬೆಂಚುಗಳನ್ನು ನೀಡುತ್ತಾ ಬರಲಾಗಿದೆ ಎಂದರು.

ಶಾಲೆಯ ಮುಖ್ಯಶಿಕ್ಷಕ ವಿಜಯ್ಕುಮಾರ್ ಹಾಗೂ ಶಾಲೆಯ ಸಹ ಶಿಕ್ಷಕರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net