ನಿತ್ಯ ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

Exercise regularly and stay healthy.
ವಿಜಯಪುರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು. ಡಾ. ಆನಂದ ಝಳಕಿ, ಫರೀನ ಖಾನ್​, ಶ್ವೇತಾ ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ಇಂದಿನ ಆಧುನಿಕ ಕಾಲದಲ್ಲಿ ಮನುಷ್ಯನಿಗೆ ರೋಗಗಳು ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರೂ ನಿತ್ಯ ವ್ಯಾಯಾಮ ಮಾಡುವ ಮೂಲಕ ನಮ್ಮ ಆರೋಗ್ಯ ಸದೃಢವಾಗಿರಲಿದೆ ಎಂದು ಜಿಲ್ಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಡಾ. ಆನಂದ ಝಳಕಿ ಹೇಳಿದರು.

ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಮುಂದಿನ ಭವಿಷ್ಯತ್ತಿನ ಪ್ರಜೆಗಳು. ಅವರ ಆರೋಗ್ಯ ಬಹಳ ಮುಖ್ಯವಾಗಿದ್ದು, ಯುವ ಪೀಳಿಗೆ ಸ್ವಾಸ್ಥದಿಂದ ಇದ್ದರೆ ದೇಶದ ಏಳಿಗೆ ಸಾಧ್ಯ ಎಂದರು.

ಪ್ರಾಚಾಯೆರ್ ಫರೀನ ಖಾನ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕಿ ಶ್ವೇತಾ ಪಾಟೀಲ ನಿರೂಪಿಸಿದರು. ಶಿಕ ಅಲ್ತಾಫ್​ ಪಟೇಲ್​ ವಂದಿಸಿದರು. ಶಿಕರಾದ ಪ್ರವಿಣಕುಮಾರ ಗೆಣ್ಣೂರ, ಎ.ಎಚ್​. ಸಗರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net