ಸದೃಢ ದೇಹ, ಮನಸ್ಸಿಗೆ ವ್ಯಾಯಾಮ ಅಗತ್ಯ

3TLR1
Published on

ತಲ್ಲೂರ: ಪ್ರಸ್ತುತ ದಿನಗಳಲ್ಲಿ ಯುವಕರು ದುಶ್ಚಟಗಳ ದಾಸರಾಗಿ ಅಮೂಲ್ಯ ಬದುಕು ಹಾಳು ಮಾಡಿಕೊಳ್ಳುತ್ತಿರುವುದು ಖೇದಕರ ಸಂಗತಿ. ಸದೃಢ ದೇಹ ಮತ್ತು ಮನಸ್ಸು ತಮ್ಮದಾಗಿಸಿಕೊಳ್ಳಲು ನಿತ್ಯ ವ್ಯಾಯಾಮ ಅಗತ್ಯವಾಗಿದೆ ಎಂದು ಮಾಜಿ ಸಂಸದೆ ಮಂಗಲ ಅಂಗಡಿ ಅಭಿಮತ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಜೈ ಜವಾನ್ ಜೈ ಕಿಸಾನ್ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಸಂಸದರ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿದ ವ್ಯಾಯಾಮ ಶಾಲೆ ಉದ್ಘಾಟಿಸಿ ಮಾತನಾಡಿ, ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಮಹತ್ವದಾಗಿದೆ ಎಂದರು.

ನಿವೃತ್ತ ಮುಖ್ಯಶಿಕ್ಷಕ ಎ.ವಿ.ಇಂಗಳೆ, ಪಿಡಿಒ ವಿಜಯಕುಮಾರ ಅಂಗಡಿ ಮಾತನಾಡಿ, ಶಾಲಾ ಹಂತದಲ್ಲಿಯೇ ಮಕ್ಕಳಿಗೆ ದೇಶಾಭಿಮಾನ, ನಾಯಕತ್ವ ಗುಣ ಹಾಗೂ ಪರೋಪಕಾರ ಮನೋಭಾವನೆ ಬೆಳೆಸಬೇಕು ಎಂದರು.

ಮುನವಳ್ಳಿ ಸೋಮಶೇಖರಮಠದ ಮುರಘೇಂದ್ರ ಸ್ವಾಮೀಜಿ, ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಕಮಲಾಕ್ಷಿ ದೇಸಾಯಿ, ಗ್ರಾಪಂ ಅಧ್ಯಕ್ಷೆ ಕವಿತಾ ಬಾಲರಡ್ಡಿ, ಪಿಡಿಒ ಎಚ್.ಕೆ.ಚೌರಡ್ಡಿ, ಶಂಕರಗೌಡ ಪಾಟೀಲ, ಎಂ.ವಿ.ಉಪ್ಪಿನ, ಬಸಪ್ಪ ಅಂಗಡಿ, ಚನ್ನಪ್ಪ ಕಡಬಿ, ಮಹಾದೇವ ಹೊಸವಾಳ, ಅಜಾದ್ ಕುದರಿ, ಕಮಾಲಸಾಬ್ ಕಂಗನೊಳ್ಳಿ, ಶಂಕರೆಪ್ಪ ಗಾಣಿಗೇರ, ವೀರಣ್ಣ ತಲ್ಲೂರ, ಭೀಮಶೆಪ್ಪ ಉಪ್ಪಾರ, ರುದ್ರಪ್ಪ ಹೊಸವಾಳ, ಬಸಲಿಂಗಪ್ಪ ಶೀಲವಂತರ, ಭೀಮಪ್ಪ ಗಾಣಿಗೇರ, ಹುಸೇನಸಾಬ ಕುದರಿ, ಬಸವಂತಪ್ಪ ಹೋಳಿ, ಬಸವರಾಜ ಕಾಜಗಾರ, ಸೋಮಲಿಂಗಪ್ಪ ಉಪ್ಪಾರ, ಬಾಪುಸಾಬ್ ಗುಡಗುಡಿ, ಬಾಬಾಸಾಬ್ ಬಾಣದಾರ,

ಮಹಾಂತೇಶ ಕೊಪ್ಪದ, ರಮೇಶ ಮಡಿವಾಳರ, ಸಂಗನಗೌಡ ಪಾಟೀಲ, ನಾಗಪ್ಪ ಲಕ್ಕನ್ನವರ, ಮಲಿಕಸಾಬ್ ಸಾಬರ, ಮಹೇಶ ಬಾವಿಕಟ್ಟಿ, ಈರಣ್ಣ ಉಪ್ಪಿನ, ಪ್ರಭಾತರಾವ್ ಇಂಗಳೆ, ಶಿವಾನಂದ ಗಾಣಿಗೇರ, ಧರೇಪ್ಪ ಗಾಣಿಗೇರ, ಅದಮ ಶಿದ್ನಾಳ, ಮಂಜುನಾಥ ಉಗರಗೋಳ, ಶಾನೂರ ಜಮಾದಾರ, ವಿನೋದ ತಲ್ಲೂರ, ಗಿರೀಶ ಗಾಣಿಗೇರ, ರಾಜಶೇಖರ ಕಲ್ಲನ್ನವರ, ಪ್ರಶಾಂತ ದುಂಡನಕೊಪ್ಪ, ಯಲ್ಲನಾಯ್ಕ ನಾಯ್ಕರ, ಛಾಯಾ ತಲ್ಲೂರ ಇತರರಿದ್ದರು. ಮುಖ್ಯಶಿಕ್ಷಕ ಡಿ.ಡಿ.ಭೋವಿ ಸ್ವಾಗತಿಸಿದರು, ಶಿಕ್ಷಕ ಬಸನಗೌಡ ಅಣ್ಣಿಗೇರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net