

ನಿಪ್ಪಾಣಿ: ಇಂದಿನ ದಿನಗಳಲ್ಲಿ ಹದಯ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಅದನ್ನು ತಡೆಯಲು ಆಹಾರದ ಸರಿಯಾದ ಕ್ರಮ, ವ್ಯಾಯಾಮ, ಯೋಗಾಸನ ಅಗತ್ಯ
ಎಂದು ಸ್ಥಳೀಯ ವಿರೂಪಾಕ್ಷಲಿಂಗ ಸಮಾಮಠದ ಪ್ರಾಣಲಿಂಗ ಸ್ವಾಮೀಜಿ ಹೇಳಿದರು.
ಸ್ಥಳೀಯ ಶ್ರೀ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ಹೇರಿಯ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಸಹಕಾರಿಯ ರಜತ ಮಹೋತ್ಸವ ಸಭಾಗಹದಲ್ಲಿ ಹಮ್ಮಿಕೊಂಡಿದ್ದ ಉಚಿತ ಹದಯರೋಗ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ. ಸಿ.ಬಿ. ಕುರಬೆಟ್ಟಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಅಪಾಯ ತಪ್ಪಿಸಬಹುದು ಎಂದರು. ಸಿದ್ಧಗಿರಿ ಆಸ್ಪತ್ರೆಯ ಹದಯರೋಗ ತಜ್ಞ ಡಾ. ಶಂತನು ಪಾಲಕರ ಮಾತನಾಡಿ, ಕನ್ಹೇರಿ ಆಸ್ಪತ್ರೆಯಲ್ಲಿ ಜು.31ರ ವರೆಗೆ ಉಚಿತ ಆಂಜಿಯೋಗ್ರಫಿ, ಆಂಜಿಯೋಪ್ಲಾಸ್ಟಿ ಹಾಗೂ ಬೆಪಾಸ್ ಸರ್ಜರಿ ಮಾಡಲಾಗುತ್ತಿದ್ದು, ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಉಪಾಧ್ಯಕ್ಷ ಸುರೇಶ ಶೆಟ್ಟಿ, ನಿರ್ದೇಶಕ ಪ್ರತಾಪ ಪಟ್ಟಣಶೆಟ್ಟಿ, ಶ್ರೀಕಾಂತ ಪರಮನೆ, ಮಹೇಶ ಬಾಗೇವಾಡಿ, ಸದಾನಂದ ಧುಮಾಲೆ, ಪ್ರತಾಪ ಮೇತ್ರಾಣಿ, ಅಶೋಕ ಲಿಗಾಡೆ, ಪುಷ್ಪಾ ಕುರಬೆಟ್ಟಿ, ವಿಜಯ ಶೆಟ್ಟಿ, ಸುವರ್ಣಾ ಪಟ್ಟಣಶೆಟ್ಟಿ, ಸದಾಶಿವ ಧನಗರ, ದಿನೇಶ ಪಾಟೀಲ, ಸಿಇಒ ಶಶಿಕಾಂತ ಆದಣ್ಣನವರ, ಸಂಸ್ಥೆಯ ನಿರ್ದೇಶಕ ಶ್ರೀಕಾಂತ ಪರಮನೆ, ಸುಜಾತಾ ಜಾಧವ, ಸೂರಜ ಘೋಡಕೆ ಇತರರು ಇದ್ದರು.