ಗೊಳಸಂಗಿಯಲ್ಲಿ ಅವಿರೋಧ ಆಯ್ಕೆಗೆ ಕಸರತ್ತು

7S7S7S7S
Exercise for unopposed election in Golasangi
Published on

ಗೊಳಸಂಗಿ: ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂ (ಪಿಕೆಪಿಎಸ್​)ದ ಆಡಳಿತ ಮಂಡಳಿ ಚುನಾವಣೆ ೂಷಣೆಯಾಗಿದ್ದು, ಅವಿರೋಧ ಆಯ್ಕೆ ಮಾಡುವ ಕುರಿತು ಸಂದ ಆವರಣದಲ್ಲಿ ಭಾನುವಾರ ಪ್ರಮುಖರ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್​ ನಿರ್ದೇಶಕ ಶೇಖರ ದಳವಾಯಿ, ನಮ್ಮ ಸಂಕ್ಕೆ 75 ವರ್ಷದ ಇತಿಹಾಸವಿದೆ. ಆದರೆ, ಇದುವರೆಗೂ ಚುನಾವಣೆ ನಡೆದ ಉದಾಹರಣೆ ಇಲ್ಲ. ಅದೇ ಸಂಪ್ರದಾಯ ಮುಂದುವರಿಸಿಕೊಂಡು ಹೋಗಬೇಕೆಂದು ಮನವಿ ಮಾಡಿದರು.

ಮರಾಠಾ ಸಮಾಜದ ಅಧ್ಯ ಗಂಗಾರಾಮ ಪವಾರ, ಅಧ್ಯರ ಆಯ್ಕೆ ಸೌಹಾರ್ದಯುತವಾಗಿ ನಡೆಯಬೇಕು ಎಂದರು.

ಅಂಜುಮನ್​ ಇಸ್ಲಾಂ ಕಮಿಟಿ ಅಧ್ಯ ತಜಮುಲಖಾದ್ರಿಸಾಹೇಬ ಜಾಗೀರದಾರ ಮಾತನಾಡಿ, ಅವಿರೋಧ ಆಯ್ಕೆ ಸೂಕ್ತ. ಮುಸ್ಲಿಮರ ಜನಸಂಖ್ಯೆ ಹೆಚ್ಚು ಇರುವುದರಿಂದ ನಮಗೆ ಈ ಬಾರಿ ಎರಡು ಸ್ಥಾನ ಕೊಡಬೇಕು ಎಂಬ ಬೇಡಿಕೆ ಇಟ್ಟರು. ರಾಜ್ಯ ದೇವಾಂಗ ಸಂ ಯುವ ಟಕದ ನಿರ್ದೇಶಕ ಡಿ.ಬಿ.ಕುಪ್ಪಸ್ತ (ಡಿಬಿಕೆಜಿ) ಮಾತನಾಡಿ, ದೇವಾಂಗ ಸಮಾಜದ ಜನರು ಕೂಡ ಹೆಚ್ಚಿಗಿದ್ದಾರೆ. ನಮ್ಮ ಸಮಾಜಕ್ಕೂ ಎರಡು ಸ್ಥಾನ ಕೊಡಬೇಕು ಎಂದರು.

ಭಾವಸಾರ ತ್ರೀಯ ಸಮಾಜದ ಮುಖಂಡ ದೇವೇಂದ್ರ ಬಳಮಕರ ಮಾತನಾಡಿ, ನಮ್ಮದು ಸಣ್ಣ ಸಮಾಜ. 75 ವರ್ಷದ ಇತಿಹಾಸದಲ್ಲಿ ನಮಗೆ ಒಂದು ಸಲವೂ ಅವಕಾಶ ಸಿಕ್ಕಿಲ್ಲ. ಈ ಬಾರಿ ನಮಗೊಂದು ಸ್ಥಾನ ಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಹೇಗೆ ಸ್ಥಾನ ಮಾನ ನೀಡಲಾಗಿತ್ತೋ ಅದೇ ರೀತಿ ಮುಂದುವರಿಯಲಿ ಎಂದು ಲಿಂಗಾಯತ ಸಮಾಜದ ಹುಚ್ಚಪ್ಪ ಕಮತಗಿ ಸಲಹೆ ನೀಡಿದರು.

ಪ್ರಮುಖರಾದ ಬಸಯ್ಯಸ್ವಾಮಿ ಪಾರ್ವತಿಮಠ, ಮಹಿಬೂಬ ಹತ್ತರಕಿಹಾಳ, ಸಹದೇವ ಪವಾರ, ಶಂಕರಗೌಡ ಪಾಟೀಲ, ಚನ್ನಮಲ್ಲ ಉಳ್ಳಿ, ವಿ.ಬಿ.ಕಿಣಗಿ, ಬಂದೇನವಾಜ ಡೋಲಚಿ, ಕುಮಾರಗೌಡ ಪಾಟೀಲ, ನಾರಾಯಣ ಕಿರಗತ, ಅಯ್ಯಪ್ಪಗೌಡ ಪರಮಗೊಂಡ, ಶೇಕಪ್ಪ ಜಮಖಂಡಿ, ಪ್ರಕಾಶ ಗುಡದಿನ್ನಿ ಇದ್ದರು.

3 ದಿನದಲ್ಲಿ ಒಂದೇ ನಾಮಪತ್ರ : ಗೊಳಸಂಗಿ, ಮುತ್ತಗಿ, ಮಸೂತಿ ತೆಲಗಿ ಗ್ರಾಮಗಳ ಪಿಕೆಪಿಎಸ್​ಗಳಲ್ಲಿ 28ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಇಲ್ಲಿವರೆಗೆ ಸಾಮಾನ್ಯ ೇತ್ರಕ್ಕೆ ಒಂದೇ ನಾಮಪತ್ರ ಮಾತ್ರ ಸಲ್ಲಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net