

ಮಾನ್ವಿ: ಪಟ್ಟಣದ ಬಸವ ವೃತ್ತದಲ್ಲಿ ಬಿಜೆಪಿ ತಾಲೂಕು ಘಟಕದಿಂದ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ, ಸ್ಟಾೃಂಪ್ ಶುಲ್ಕ, ಮಧ್ಯದ ಹಾಗೂ ಇತರೆ ದರ ಏರಿಕೆ ಜನಸಾಮಾನ್ಯರಗೆ ಭಾರವಾಗಲಿದ್ದು, ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:ಹಾಲಿನ ದರ ಏರಿಕೆಯಿಂದ ಗ್ರಾಹಕರಿಗೆ ತೊಂದರೆ
ಪ್ರಮುಖರು ಮಾತನಾಡಿ, ಸರ್ಕಾರದಿಂದ ಹೊಸ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಕೆಲ ದಿನಗಳ ಹಿಂದೆ ಡೀಸೆಲ್, ಹಾಲು, ವಿದ್ಯುತ್, ನೀರಿನ ದರ ದರ ಹೆಚ್ಚಿಸಿದ್ದು, ದಿನಬಳಕೆ ವಸ್ತುಗಳು, ಸರಕು ಸಾಮಗ್ರಿಗಳ ದರವೂ ಏರಿಕೆ ಕಂಡಿದೆ. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಕಾಮಗಾರಿಗಳಲ್ಲಿ ಶೇ.4 ಮೀಸಲಾತಿಯ ತುಷ್ಟಿಕರಣದ ನಿರ್ಧಾರವನ್ನು ಬಿಜೆಪಿ ವಿರೋಧಿಸುತ್ತದೆ. ಸಂವಿಧಾನದಲ್ಲಿ ಧರ್ಮ ಆಧರಿತ ಮೀಸಲಾತಿಗೆ ಅವಕಾಶವಿಲ್ಲ. ಎಸ್ಸಿ-ಎಸ್ಟಿ ಮೀಸಲಾತಿಯಲ್ಲಿ 39 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ. ಇದರಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಅನ್ಯಾಯವಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಬಿಜೆಪಿ ತಾಲುಕು ಅಧ್ಯಕ್ಷ ಸುಧಾಕರ, ಪ್ರಮುಖರಾದ ಉಮೇಶ ಸಜ್ಜನ್, ಶರಣಪ್ಪಗೌಡ ನಕ್ಕುಂದಿ, ವೀರನಗೌಡ ಪೋತ್ನಾಳ, ಕುಮಾರಸ್ವಾಮಿ ಮೇದಾ, ಅಮರೇಶ ನಾಯಕ, ಮಲಿಕಾರ್ಜುನಗೌಡ ಸಂಗಾಪುರ, ವಿಶ್ವನಾಥ ನಂದಿಹಾಳ, ಬಸವಪ್ರಭು ಕರಡಿಗುಡ್ಡ, ಉಮಾಪತಿ ಹರವಿ, ಶಿವುಕುಮಾರ, ಭಾಸ್ಕರ ಜಗ್ಲಿ, ವೆಂಕಟೇಶ ಇತರರಿದ್ದರು.