ಸಂಭ್ರಮದ ಜಾತ್ರಾ ಮಹೋತ್ಸವ

01010101
Published on

ಕಾಗವಾಡ: ಶೇಡಬಾಳ ಪಟ್ಟಣದ ಮಾಯಕ್ಕನಕೇರಿಯಲ್ಲಿ ಮಾಯಕ್ಕಾದೇವಿ ಜಾತ್ರೆ ಬುಧವಾರ ಸಂಭ್ರಮದಿಂದ ಜರುಗಿತು. ಮುಖಂಡರಾದ ತಾತ್ಯಾಸಾಬ ಪಾಟೀಲ(ಗೌಡರು), ವಿನೋದ ಪಾಟೀಲ, ಸುನೀಲ ಪಾಟೀಲ(ಗೌಡರು), ಅಣ್ಣಾಗೌಡ ಪಾಟೀಲ

ದೇವಿಗೆ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಬೆಳಗ್ಗೆ ಗ್ರಾಮದ ಬೀರದೇವರ ಗುಡಿಯಿಂದ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ಜರುಗಿತು.

ಸುರೇಶ ಕುಸನಾಳೆ, ಮಹಾದೇವ ಕಟ್ಟಿಕರ, ಅಲ್ಲಪ್ಪ, ತಾತ್ಯಾಸಾಬ ಪಾಟೀಲ, ವಿನೋದ ಪಾಟೀಲ, ಸುನೀಲ ಪಾಟೀಲ, ಅಣ್ಣಾಗೌಡ ಪಾಟೀಲ, ಅಪ್ಪಾಸಾಬ ಮಾಳಿ, ಈರಪ್ಪ ನಂದಗಾವೆ ಪೂಜಾರಿ, ಮಹಾದೇವ ಕೆಂಪವಾಡೆ, ಅಶೋಕ ಕಣಗಲೆ, ಶಂಕರ ದಾಸರ, ಬಸಪ್ಪ ನಾಯಿಕ, ಶಂಕರ ಬಡಚಿ, ಹೊಣ್ಣಪ್ಪ ಗಾವಡೆ, ಬಾಳು ನರವಾಡೆ, ನಾಗು ಕಟ್ಟಿಕರ, ಕೃಷ್ಣಾ ಕಟ್ಟಿಕರ, ಸುರೇಶ ಪೂಜಾರಿ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net