ಮೂರನೇ ದಿನದ ಕ್ರೀಡಾಕೂಟದಲ್ಲಿ ಉತ್ಸಾಹ

h7-KMCRI Sports 1
Published on

ಹುಬ್ಬಳ್ಳಿ: ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಹಾಗೂ ಕರ್ನಾಟಕ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ನಗರದ ಕೆಎಂಸಿಆರ್‌ಐ ಕ್ರೀಡಾಂಗಣದಲ್ಲಿ ಗುರುವಾರ ಅಂತರ ಕಾಲೇಜ್ ಮಟ್ಟದ ವಿವಿಧ ಕ್ರೀಡಾಕೂಟಗಳು ನಡೆದವು.

ಪುರುಷರ ವಿಭಾಗದ 1500 ಮೀಟರ್ ಓಟದಲ್ಲಿ ಮೂಲ್ಕಿಯ ಸೇಂಟ್ ಅನ್ನಾಸ್ ನರ್ಸಿಂಗ್ ಕಾಲೇಜ್‌ನ ಥಾಮಸ್ ಪೌಲ್ ಒ.ಜೆ. (ಪ್ರಥಮ), ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್‌ನ ನಿರಂಜನ ರೆಡ್ಡಿ (ದ್ವಿತೀಯ), ಮೈಸೂರು ಸರ್ಕಾರಿ ನರ್ಸಿಂಗ್ ಕಾಲೇಜ್‌ನ ಬಸವರಾಜ ಡಿ.ಪಿ (ತೃತೀಯ) ಗೆದ್ದಿದ್ದಾರೆ.

400 ಮೀಟರ್ ಓಟದಲ್ಲಿ ವಿಜಯಪುರದ ಅಲ್‌ಅಮಿನ್ ಮೆಡಿಕಲ್ ಕಾಲೇಜ್‌ನ ಮಹೇಂದ್ರ ಚೌಧರಿ (ಪ್ರಥಮ), ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್‌ನ ನಿರಂಜನ ರೆಡ್ಡಿ (ದ್ವಿತೀಯ), ಮೈಸೂರು ಮೆಡಿಕಲ್ ಕಾಲೇಜ್‌ನ ಸುಮನ್ ಬಿದರೆ (ತೃತೀಯ) ವಿಜಯಶಾಲಿಗಳಾಗಿದ್ದಾರೆ.

ಜಾವೆಲಿನ್ ಥ್ರೋನಲ್ಲಿ ಮಂಡ್ಯ ಮೆಡಿಕಲ್ ಕಾಲೇಜ್‌ನ ರಾಜೇಶ ಮೊಗವೀರ (ಪ್ರಥಮ), ಉಜಿರೆ ಎಸ್‌ಡಿಎಂ ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸ್‌ನ ಉಮೇಶ ಜಾಧವ (ದ್ವಿತೀಯ), ಸವದತ್ತಿ ಶ್ರೀ ಶಿವಯೋಗೇಶ್ವರ ರೂರಲ್ ಮೆಡಿಕಲ್ ಕಾಲೇಜ್‌ನ ಸಂದೀಪ ಕೆ. ತೃತೀಯ ಸ್ಥಾನ ಪಡೆದಿದ್ದಾರೆ.

ಉದ್ದ ಜಿಗಿತದಲ್ಲಿ ಮೂಡಬಿದರಿಯ ಆಳ್ವಾಸ್ ಮೆಡಿಕಲ್ ಕಾಲೇಜ್‌ನ ಸೂರ್ಯ ಪಿ. (ಪ್ರಥಮ), ಬೆಂಗಳೂರು ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜ್‌ನ ಡಿ. ರಾಜೇಶ (ದ್ವಿತೀಯ), ಮೈಸೂರು ಮೆಡಿಕಲ್ ಕಾಲೇಜ್‌ನ ರಫೆ ಎ.ಎಚ್. ತೃತೀಯ ಸ್ಥಾನ ಪಡೆದಿದ್ದಾರೆ.

ಮಹಿಳೆಯರ ವಿಭಾಗದ 1500 ಮೀಟರ್ ಓಟದಲ್ಲಿ ಶಿವಮೊಗ್ಗ ಮೆಡಿಕಲ್ ಕಾಲೇಜ್‌ನ ಸಾಕ್ಷಿ ಎಸ್.ಡಿ. (ಪ್ರಥಮ), ಹುಬ್ಬಳ್ಳಿ ಕೆಎಲ್‌ಇ ನರ್ಸಿಂಗ್ ಕಾಲೇಜ್‌ನ ಸಿಂಚನಾ ಎನ್. (ದ್ವಿತೀಯ), ಮಂಡ್ಯ ಮೆಡಿಕಲ್ ಕಾಲೇಜ್‌ನ ನೇಹಾ ಜಾನ್ಸ್ (ತೃತೀಯ) ಗೆದಿದ್ದಾರೆ.

20 ಕಿ.ಮೀ. ವಾಕ್‌ನಲ್ಲಿ ಚಿಕ್ಕಮಗಳೂರು ಮೆಡಿಕಲ್ ಕಾಲೇಜ್‌ನ ಡಾಕಿಬಾಯಿ ಬಿ. (ಪ್ರಥಮ), ಬೆಂಗಳೂರು ಸೇಂಟ್ ಥೆರೆಸಾ ನರ್ಸಿಂಗ್ ಕಾಲೇಜ್‌ನ ಜುನಾಮೋಲ್ (ದ್ವಿತೀಯ), ಹುಬ್ಬಳ್ಳಿ ಕೆಎಂಸಿಆರ್‌ಐ ನರ್ಸಿಂಗ್ ಕಾಲೇಜ್‌ನ ವಿಶಾಲ ತೃತೀಯ ಸ್ಥಾನ ಪಡೆದಿದ್ದಾರೆ.

400 ಮೀಟರ್ ಓಟದಲ್ಲಿ ಮೂಡಬಿದರಿಯ ಅಳ್ವಾಸ್ ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸ್ ಕಾಲೇಜ್ ಲಕ್ಷ್ಮೀ ವೈಷ್ಣವಿ (ಪ್ರಥಮ), ಉಡುಪಿ ಸಿಎಸ್‌ಐ ಲಂಬಾರ್ಡ್ ನರ್ಸಿಂಗ್ ಕಾಲೇಜ್‌ನ ಮನಿಷಾ (ದ್ವಿತೀಯ), ಮಂಗಳೂರು ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜ್‌ನ ಸುಪ್ರಿಯಾ (ತೃತೀಯ) ಗೆದ್ದಿದ್ದಾರೆ.

ಜಾವೆಲಿನ್ ಥ್ರೋನಲ್ಲಿ ದಾವಣಗೆರೆಯ ಎಸ್‌ಎಸ್‌ಐಎಂಎಸ್‌ಆರ್‌ಐನ ಅಶ್ವಿನಿ ಹೆಗಡೆ (ಪ್ರಥಮ), ಹುಬ್ಬಳ್ಳಿ ಕೆಎಂಸಿಆರ್‌ಐನ ಬಿಂದುಶ್ರೀ (ದ್ವಿತೀಯ), ಚಿತ್ರದುರ್ಗ ಬಸವೇಶ್ವರ ಮೆಡಿಕಲ್ ಕಾಲೇಜ್‌ನ ಕೀರ್ತಿ ಭೂಷಣ ತೃತೀಯ ಸ್ಥಾನ ಪಡೆದಿದ್ದಾರೆ.

ಉದ್ದ ಜಿಗಿತದಲ್ಲಿ ಮಂಗಳೂರು ಲಕ್ಷ್ಮೀ ನರ್ಸಿಂಗ್‌ಕಾಲೇಜ್‌ನ ಅಲಿನಾ ಜೇಮ್ಸ್ (ಪ್ರಥಮ), ಬಾಗಲಕೋಟೆ ಬಿವಿವಿಎಸ್ ಸಜ್ಜಲಶ್ರೀ ನಸಿರ್ಂಗ್ ಕಾಲೇಜ್‌ನ ಅಕ್ಷತಾ (ದ್ವಿತೀಯ), ಶಿವಮೊಗ್ಗದ ಮೆಡಿಕಲ್ ಕಾಲೇಜ್‌ನ ಸಾಕ್ಷಿ ಎಸ್.ಡಿ. ತೃತೀಯ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net