ಮೈನವಿರೇಳಿಸಿದ ಕುಸ್ತಿ ಪ್ರದರ್ಶನ

13BLH6
Published on

ಬಸವರಾಜ ಕಲಾದಗಿ ಬೈಲಹೊಂಗಲ

ತಾಲೂಕಿನ ಸಂಗೊಳ್ಳಿ ಗ್ರಾಮ ಪಂಚಾಯಿತಿ ಆವರಣದ ಬಯಲು ಕುಸ್ತಿ ಕಣದಲ್ಲಿ ಸೋಮವಾರ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸತಿ ಇಲಾಖೆ, ಯುವಜನಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ರಾಜ್ಯ, ರಾಷ್ಟ್ರ ಮಟ್ಟದ ಪುರುಷರು ಮತ್ತು ಮಹಿಳೆಯರ ಹೊನಲು ಬೆಳಕಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಗಳು ರೋಚಕವಾಗಿ ನಡೆದವು. ಕುಸ್ತಿ ಪಂದ್ಯಾಟಕ್ಕೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು. ಕುಸ್ತಿಪಟುಗಳ ಶಕ್ತಿ ಪ್ರದರ್ಶನದಿಂದ ಕಣ ರಂಗೇರಿತ್ತು. ಪ್ರೇಕ ಗ್ಯಾಲರಿಯಲ್ಲಿ ಕುಸ್ತಿಪ್ರೇಮಿಗಳು ಸಿಳ್ಳೆ, ಕೇಕೇ ಹಾಕಿ, ಪೆಲ್ವಾನರನ್ನು ಹುರುದುಂಬಿಸಿದರು.

ಪುರುಷ ವಿಭಾಗ: ಮೊದಲ ಜೋಡಿ ಕುಸ್ತಿಯಲ್ಲಿ ಮಹಾರಾಷ್ಟ್ರದ ಬಾಲಾಜಿ ಮೆಟಕರ ಜತೆ ಸೆಣಸಿದ ಹರಿಯಾಣ ಪೆಲ್ವಾನ್​ ವಿಪಿನ್​ ದಹಿಯಾ ತುರುಸಿನ ಹೋರಾಟದಲ್ಲಿ ವಿಜಯಶಾಲಿಯಾದರು. ಎರಡನೇ ಕುಸ್ತಿಯಲ್ಲಿ ಹಾವೇರಿ ಕೇಸರಿ ಪೆಲ್ವಾನ ಕಾರ್ತಿಕ ಕಾಟೆ ನಂತರದಲ್ಲಿ ಧಾರವಾಡದ ನಾಗರಾಜ ಬಸಿಡೋಣಿ, ತದನಂತರದಲ್ಲಿ ಬೆಳಗಾವಿ ದಸರಾ ಕೇಸರಿ ಶಿವಯ್ಯ ಪೂಜೇರಿ ಗೆಲುವಿನ ನಗೆ ಬೀರಿದರು. ಒಟ್ಟು 33 ಜೋಡಿ ಸೆಣಸಾಡಿದವು.

ಮಹಿಳಾ ವಿಭಾಗ: ಮಹಾರಾಷ್ಟ್ರದ ಮಯೂರಿ ಸಾಳುಂಕೆ ಜತೆ ಸೆಣಸಿದ ಹಳಿಯಾಳದ ಪ್ರತಿಾ ಭೋವಿ ಗೆಲುವು ಸಾಧಿಸಿದರು. ಎರಡನೇ ಜೋಡಿಯಲ್ಲಿ ಬೆಳಗಾವಿ ರಾಧಿಕಾ ತೊಂಡಿಹಾಲ, ಮಹಾರಾಷ್ಟ್ರದ ಸ್ಮಿತಾ ಪಾಟೀಲ, ಮೂರನೇ ಜೋಡಿಯ ಧಾರವಾಡದ ಕಾವ್ಯಾ ದಾನನ್ನವರ ಜೆತೆ ಖಾನಾಪುರದ ರುತೂಜಾ ಗುರವ ಸಮಬಲ ಸಾಧಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಶ್ರೀನಿವಾಸ, ತಹಸೀಲ್ದಾರ್​ ಎಚ್​.ಎನ್​. ಶಿರಹಟ್ಟಿ, ತಾಪಂ ಇಇ ಕಿರಣ ೂರ್ಪಡೆ, ಪಿಎಸ್​ಐ ಎ್​.ವೆ. ಮಲ್ಲೂರ, ಗ್ರಾಪಂ ಅಧ್ಯೆ ರೂಪಾ ಚಚಡಿ, ಉಪಾಧ್ಯ ಕ್ಕೀರಪ್ಪ ಕುರಿ, ಸದಸ್ಯರಾದ ಬಸವರಾಜ ಕೊಡ್ಲಿ, ಇಮಾಮಹುಸೇನ ಖುದ್ದುನವರ, ರತ್ನಾ ಆನೇಮಠ, ಈರಣ್ಣ ಹಳಿಮನಿ, ಶಿವಕುಮಾರ ಪೂಜೇರ, ಬಾಬು ತಳವಾರ, ಸಂಗನಗೌಡ ಪಾಟೀಲ, ದೀಪಾ ಬಡವಣ್ಣವರ, ಗಂಗವ್ವ ಹೊಳೆಪ್ಪನವರ, ಮಂಜುಳಾ ಕೊಡೊಳ್ಳಿ, ಸನಾ ಖುದ್ದುನವರ, ಗಂಗವ್ವ ಪೂಜೇರ, ಪಿಡಿಒ ಅಡಿವೆಪ್ಪ ತಳವಾರ, ಗಣ್ಯರಾದ ಅರುಣ ಯಲಿಗಾರ, ಮಹೇಶ ಹಿರೇಮಠ, ಆಕಾಶ ಮಾಲಬನ್ನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net