ಅಬಕಾರಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ, 25 ಲಕ್ಷ ರೂ.‌ಮೌಲ್ಯದ 650 ಮದ್ಯ ಬಾಕ್ಸ್ ವಶಕ್ಕೆ

IMG-20231222-WA0010.jpg
Published on

ಬೆಳಗಾವಿ: ಮಶ್ರೂಮ್ ಬೀಜಗಳ ಚೀಲದಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿಯನ್ನು ಬೆಳಗಾವಿ ಅಬಕಾರಿ ಅಧಿಕಾರಿಗಳು ಕಾಕತಿ ಬಳಿ ವಶಕ್ಕೆ ಪಡೆದಿದ್ದಾರೆ.

25 ಲಕ್ಷ ರೂ. ಮೌಲ್ಯದ ಮಧ್ಯ ಹಾಗೂ 30 ಲಕ್ಷ ರೂ. ಮೌಲ್ಯದ ಲಾರಿಯನ್ನು ಸೀಜ್ ಮಾಡಿದ್ದಾರೆ. ಮದ್ಯದ ಬಾಟಲಿಗಳಿಗೆ ನಕಲಿ ಲೇಬಲ್ ಅಂಟಿಸಿ ಸಾಗಣೆ ಮಾಡಲಾಗುತ್ತಿತ್ತು. ಅಸಲಿಯಾಗಿ ಬಾಟಲಿಗಳ ಮೇಲಿದ್ದ ಲೇಬನ್ ಪರಿಶೀಲಿಸಿದಾಗ ಅಂತಹ ಡಿಸ್ಟಲರಿ ಕಂಪನಿ ಗೋವಾದಲ್ಲೇ ಇಲ್ಲ ಎಂಬುವುದು ಗೊತ್ತಾಗಿದೆ. 650ಕ್ಕೂ ಅಧಿಕ ಮದ್ಯದ ಬಾಕ್ಸ್ ಗಳ ಮೇಲೆ ಮಶ್ರೂಮ್ ಬೀಜಗಳ ಚೀಲಗಳನ್ನಿಟ್ಟು ಸಾಗಿಸಲಾಗುತ್ತಿತ್ತು. ರಾತ್ರಿ ಕಾಕತಿಯ ಗ್ಯಾರೇವೊಂದರಲ್ಲಿ ಲಾರಿ ರಿಪೇರಿಗೆ ನಿಂತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ತಮೀಳುನಾಡು, ಮದ್ಯಪ್ರದೇಶಕ್ಕೆ ಮದ್ಯ ಸಾಗಣೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net