ಅಬಕಾರಿ ಇನ್‌ಸ್ಪೆಕ್ಟರ್ ಮನೆಯಲ್ಲಿ ಕಳವು

vinobnagar police station
Published on

ಶಿವಮೊಗ್ಗ: ನಗರದ ಆಲ್ಕೊಳದ ಎಸ್‌ಎಲ್‌ವಿ ಬಡಾವಣೆಯಲ್ಲಿರುವ ಚನ್ನಗಿರಿ ವಲಯದ ಅಬಕಾರಿ ಇನ್‌ಸ್ಪೆಕ್ಟರ್ ಮನೆಯಲ್ಲಿ ಚಿನ್ನಾಭರಣ, ನಗದು, ಲ್ಯಾಪ್‌ಟಾಪ್ ಮತ್ತು ಐಫೋನ್ ಕಳವು ಮಾಡಲಾಗಿದೆ.

ಅಬಕಾರಿ ಇನ್‌ಸ್ಪೆಕ್ಟರ್ ಪಿ.ಜೆ.ಜಾನ್ ದಂಪತಿ ಊಟ ಮಾಡಿ ಕೊಠಡಿಯಲ್ಲಿ ಮಲಗಿದ್ದರು. ಈ ವೇಳೆ ಮಹಡಿಯಲ್ಲಿನ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳ ಜಾನ್ ದಂಪತಿ ಮಲಗಿದ್ದ ಕೊಠಡಿಯಲ್ಲೇ ಐಫೋನ್, 40 ಗ್ರಾಂ ಮಾಂಗಲ್ಯಸರ, ಲ್ಯಾಪ್‌ಟಾಪ್, ಪತ್ನಿಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 1,500 ರೂ. ನಗದು ಕಳವು ಮಾಡಿದ್ದಾನೆ.

ಹಾಸಿಗೆ ಪಕ್ಕದ ಗೋಡೆಬೀರು ತೆರೆಯುವಾಗ ಶಬ್ದವಾಗಿದೆ. ಜಾನ್ ಅವರ ಪತ್ನಿ ಎಚ್ಚರಗೊಂಡು ಯಾರೆಂದು ಪ್ರಶ್ನಿಸುತ್ತಿದ್ದಂತೆ ಕಳ್ಳ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆನಂತರ ಜಾನ್ ಬೆನ್ನಟ್ಟಿದ್ದರೂ ಸಿಗದೆ ಕಳ್ಳ ಪರಾರಿಯಾಗಿದ್ದಾನೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net