ಅಕ್ರಮ ಮದ್ಯ ಸಂಗ್ರಹಿಸಿದ್ದ ಓರ್ವ ಬಂಧನ

wine_shop_01052020
Published on

ಬೆಳಗಾವಿ:  ಅಕ್ರಮ ಮದ್ಯ ಸಂಗ್ರಹ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಪೊಲೀಸರು ಮಂಗಳವಾರ ದಾಳಿ ಓರ್ವ ವ್ಯಕ್ತಿಯನ್ನು ಬಂಧಿಸಿ 1.42 ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ ಮಾಡಿಕೊಂಡಿದ್ದಾರೆ.

ಬೆಳಗಾವಿ ತಾಂಗಡಿ ಗಲ್ಲಿಯ ಪ್ರಶಾಂತ ಚೌವ್ಹಾಣ (25) ಬಂಧಿತ. ಪ್ರಶಾಂತ ನಿವಾಸದಲ್ಲಿ 109.140 ಲೀಟರ್ ಗೋವಾ ಮದ್ಯ ಹಾಗೂ 20 ಲೀಟರ್ ಉರಾಕ್ ಪತ್ತೆಯಾಗಿದೆ. ಇವುಗಳ ಮೌಲ್ಯ ಅಂದಾಜು 1,42,845 ರೂ. ಎನ್ನಲಾಗಿದೆ. ಹಲವು ದಿನಗಳಿಂದ ನಗರದಲ್ಲಿ ಗೋವಾ ಮದ್ಯ ಮಾರಾಟ ಮತ್ತು ಸಾಗಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ.

ಗಾಂಜಾ ಸೇವಿಸುತ್ತಿದ್ದವನ ಬಂಧನ:ಬೆಳಗಾವಿ ಗಾಂಧಿನಗರದ ಬಸ್ ನಿಲ್ದಾಣ ಬಳಿ ಸಿಗರೇಟ್‌ನಲ್ಲಿ ಗಾಂಜಾ ಹಾಕಿ ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆಗೆ ಖಚಿತಪಟ್ಟಿದ್ದರಿಂದ ಸದರಿ ಆರೋಪಿತನ ಮೇಲೆ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜುನಾಥ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net