ಅಂಚೆ ಮತಪತ್ರಗಳ ವಿನಿಮಯ

26 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೆ ಮತದಾನ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಅಂಚೆ ಮತಪತ್ರಗಳ ವಿನಿಮಯಕ್ಕೆ ನಗರದ ಆರ್​.ಎಲ್​.ಎಸ್​. ಪಿಯು ಜ್ಯೂನಿಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೆ ಮತದಾನ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಅಂಚೆ ಮತಪತ್ರಗಳ ವಿನಿಮಯಕ್ಕೆ ನಗರದ ಆರ್​.ಎಲ್​.ಎಸ್​. ಪಿಯು ಜ್ಯೂನಿಯರ್​ ಕಾಲೇಜಿನಲ್ಲಿ ವಿನಿಮಯ ಕೇಂದ್ರ ಸ್ಥಾಪಿಸಲಾಗಿದೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಏ. 29ರಂದು ವಿವಿಧ ಜಿಲ್ಲೆಗಳಿಂದ ಅಂಚೆ ಮತಪತ್ರಗಳನ್ನು ಸೂಕ್ತ ಭದ್ರತೆಯೊಂದಿಗೆ ತೆಗೆದುಕೊಂಡು ಬಂದು ಚುನಾವಣಾ ಸಿಬ್ಬಂದಿ ಕರ್ತವ್ಯ ನಿರತರಾದ ಜಿಲ್ಲೆಯ ತಂಡದೊಂದಿಗೆ ಅಂಚೆ ಮತಪತ್ರಗಳನ್ನು ವಿನಿಮಯ ಮಾಡಲಾಗುತ್ತದೆ. ಅಂಚೆ ಮತಪತ್ರಗಳ ವಿನಿಮಯ ಕೇಂದ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಲೋಕಸಭೆ ಚುನಾವಣೆಗೆ ಸ್ಪಧಿರ್ಸಿರುವ ಅಭ್ಯಥಿರ್ಗಳಿಗೆ ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಈಗಾಗಲೇ ನೀಡಲಾಗಿದೆ. ಸಂಬಂಧಿಸಿದ ಪ್ರತಿನಿಧಿಗಳು ತಮ್ಮ ಚುನಾವಣಾ ಗುರುತಿನ ಚೀಟಿಯೊಂದಿಗೆ ಆಗಮಿಸಿ, ಅಂಚೆ ಮತಪತ್ರಗಳ ವಿನಿಮಯ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

ರ್​ ಕಾಲೇಜಿನಲ್ಲಿ ವಿನಿಮಯ ಕೇಂದ್ರ ಸ್ಥಾಪಿಸಲಾಗಿದೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಏ. 29ರಂದು ವಿವಿಧ ಜಿಲ್ಲೆಗಳಿಂದ ಅಂಚೆ ಮತಪತ್ರಗಳನ್ನು ಸೂಕ್ತ ಭದ್ರತೆಯೊಂದಿಗೆ ತೆಗೆದುಕೊಂಡು ಬಂದು ಚುನಾವಣಾ ಸಿಬ್ಬಂದಿ ಕರ್ತವ್ಯ ನಿರತರಾದ ಜಿಲ್ಲೆಯ ತಂಡದೊಂದಿಗೆ ಅಂಚೆ ಮತಪತ್ರಗಳನ್ನು ವಿನಿಮಯ ಮಾಡಲಾಗುತ್ತದೆ. ಅಂಚೆ ಮತಪತ್ರಗಳ ವಿನಿಮಯ ಕೇಂದ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಲೋಕಸಭೆ ಚುನಾವಣೆಗೆ ಸ್ಪಧಿರ್ಸಿರುವ ಅಭ್ಯಥಿರ್ಗಳಿಗೆ ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಈಗಾಗಲೇ ನೀಡಲಾಗಿದೆ. ಸಂಬಂಧಿಸಿದ ಪ್ರತಿನಿಧಿಗಳು ತಮ್ಮ ಚುನಾವಣಾ ಗುರುತಿನ ಚೀಟಿಯೊಂದಿಗೆ ಆಗಮಿಸಿ, ಅಂಚೆ ಮತಪತ್ರಗಳ ವಿನಿಮಯ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net