ಹೆಚ್ಚು ಯೂರಿಯ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶ

ಹೆಚ್ಚು ಯೂರಿಯ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶ
Published on

ಆಲೂರು: ಯೂರಿಯಾ ಬಳಕೆ ಮಿತವಾಗಿರಬೇಕು. ಅಗತ್ಯಕ್ಕಿಂತ ಹೆಚ್ಚು ಬಳಸಿದ್ದಲ್ಲಿ ಮಣ್ಣಿನ ಫಲವತ್ತತೆ, ಪರಿಸರ ಹಾಗೂ ಮಾನವನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ನ್ಯಾನೊ ಯೂರಿಯ ಅತ್ಯಂತ ಪರಿಣಾಮಕಾರಿಯಾಗಿದ್ದು ಜಿಲ್ಲೆಯ ರೈತರು ನ್ಯಾನೊ ಯೂರಿಯಾ ಬಳಕೆಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು.

ಪಟ್ಟಣದಲ್ಲಿರುವ ರಸಗೊಬ್ಬರಗಳ ದಾಸ್ತಾನು ಗೋದಾಮು ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಇತ್ತೀಚೆಗೆ ಮಳೆ ಜಾಸ್ತಿಯಾಗಿರುವುದರಿಂದ ಮುಸುಕಿನ ಜೋಳ, ಕಾಫಿ ಬೆಳೆಗಳಿಗೆ ಹೆಚ್ಚು ಶೀತವಾಗಿದೆ. ರೈತರು ಪುನರಾವರ್ತನೆಯಾಗಿ ಯೂರಿಯ ರಸಗೊಬ್ಬರವನ್ನು ಬಳಕೆ ಮಾಡುತ್ತಿರುವುದು ತಪ್ಪು. ಯೂರಿಯ ರಸಗೊಬ್ಬರದ ಬದಲು ಈಗ ನ್ಯಾನೊ ಯೂರಿಯ ಮತ್ತು ನ್ಯಾನೊ ಡಿಎಪಿ ದ್ರವರೂಪ ಬಂದಿದೆ. ಇದನ್ನು ಕೃಷಿಯಲ್ಲಿ ಬಳಸುವುದರಿಂದ ಶೀತವನ್ನು ತಡೆಯುತ್ತದೆ. ಇದರಿಂದ ಯೂರಿಯ ರಸಗೊಬ್ಬರದ ಬಳಕೆ ತಗ್ಗಿಸಬಹುದು. ಮುಖ್ಯಮಂತ್ರಿಗಳ ನಿರ್ದೇಶನದಂತೆ ಯೂರಿಯ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ತಾಲೂಕಿನಲ್ಲಿ 2804 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಅದರಲ್ಲಿ ಈಗಾಗಲೆ 2600 ಮೆಟ್ರಿಕ್ ಟನ್ ಗೊಬ್ಬರ ಬಂದಿದ್ದು, ರೈತರಿಗೆ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭತ್ತ ನಾಟಿ ಮಾಡುವ ಸಂದರ್ಭದಲ್ಲಿ ರಸಗೊಬ್ಬರದ ಅವಶ್ಯವಿದೆ. ಸದ್ಯದಲ್ಲೇ ಉಳಿದ ಗೊಬ್ಬರ ಬರುತ್ತದೆ. ರೈತರು ಭಯಪಡುವುದು ಬೇಡ ಎಂದರು.

ಸಂದರ್ಭದಲ್ಲಿ ಆಲೂರು ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್‌ರೆಡ್ಡಿ, ಕೃಷಿ ಅಧಿಕಾರಿ ಮಹಾಂತೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net