ಹೆಚ್ಚುವರಿ ಉಕ್ಕು ಕಾರ್ಖಾನೆ ಅಗತ್ಯವಿಲ್ಲ

18 gvt 01
ಗಂಗಾವತಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಜಡಿಯಪ್ಪ, ದುರುಗಪ್ಪ, ಯು.ಚಂದ್ರಶೇಖರ, ರಾಘವೇಂದ್ರ, ಮೈಲಾರಪ್ಪ, ಮುತ್ತಣ್ಣ ಇತರರಿದ್ದರು.
Published on

ಗಂಗಾವತಿ: ಕೊಪ್ಪಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉಕ್ಕು ಕಾರ್ಖಾನೆ ಯೋಜನೆ ಕೈಬಿಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ನಗರದ ತಾಲೂಕು ಆಡಳಿತ ಸೌಧದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಕೊಪ್ಪಳದಲ್ಲಿ ಈಗಾಗಲೇ ಉಕ್ಕು ಕಾರ್ಖಾನೆಗಳಿದ್ದು, ಪರಿಸರ ಮಾಲಿನ್ಯ ಹೆಚ್ಚಾಗಿದೆ. ಹೊಸದಾಗಿ ಉಕ್ಕು ಕಾರ್ಖಾನೆ ಆರಂಭಿಸಿದರೆ ಮತ್ತಷ್ಟು ತೊಂದರೆಯಾಗಲಿದ್ದು ವಾಯು, ಜಲ, ಶಬ್ದ ಮಾಲಿನ್ಯಗಳಿಗೆ ಕಾರಣವಾಗಲಿದೆ.

ಉದ್ಯೋಗ ಸೃಷ್ಟಿಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಹೆಚ್ಚುವರಿ ಉಕ್ಕು ಕಾರ್ಖಾನೆಯ ಅಗತ್ಯವಿಲ್ಲ. ಅದರಂತೆ ಕೊಪ್ಪಳ ವಿವಿ ರದ್ದುಪಡಿಸುವ ನಿರ್ಧಾರ ಸರ್ಕಾರ ಕೈಬಿಡಬೇಕಿದೆ. ಹಿಂದುಳಿದ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೊಪ್ಪಳ ವಿವಿ ವರದಾನವಾಗಿದ್ದು, ಆರ್ಥಿಕ ಬಲ ನೀಡಬೇಕಿದೆ. ಕಾರಟಗಿ ಪದವಿ ಕಾಲೇಜು, ಆದರ್ಶ ಶಾಲೆಗಳ ಆರಂಭ, ವಸತಿ ನಿಲಯಗಳ ಹೆಚ್ಚಳ ಸೇರಿ ವೃತ್ತಿಪರ ಕೋರ್ಸ್‌ಗಳ ಕಾಲೇಜುಗಳನ್ನು ಆರಂಭಿಸುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net