

ವಿಜಯಪುರ:ತಾಲೂಕಿನ ಅರಕೇರಿಯಲ್ಲಿ ಇತ್ತೀಚೆಗೆ ನಡೆದ ವಲಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ನಗರದ ಹೊರವಲಯದ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ವೈಯಕ್ತಿಕ ವಿಭಾಗದಲ್ಲಿ ವಿದ್ಯಾರ್ಥಿ ಓಂ ಮಿಂಚನಾಳ ತ್ರಿವಿಧ ಜಿಗಿತದಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ಮತ್ತು ಕೋಲು ನೆಗೆತದಲ್ಲಿ ದ್ವೀತಿಯ ಹಾಗೂ ಥ್ರೋಬಾಲ್ನಲ್ಲಿ ಪ್ರಥಮ ಸ್ಥಾನ, ವಸಂತ ನಿರಮಣಿಗಾರ ಎತ್ತರ ಜಿಗಿತದಲ್ಲಿ ಪ್ರಥಮ, 100 ಮೀ. ಓಟದಲ್ಲಿ ದ್ವೀತಿಯ ಹಾಗೂ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನ, ರೇವಣ್ಣ ಡೋಣಗಿ 110 ಮೀ. ಹರ್ಡಲ್ಸ್ನಲ್ಲಿ ಪ್ರಥಮ ಹಾಗೂ 200 ಮೀ. ಓಟದಲ್ಲಿ ದ್ವೀತಿಯ ಸ್ಥಾನ, ಅಬುಸುಫಿಯಾನ್ 400 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿ ಶ್ರೇಯಸ್ ಬಬಲೇಶ್ವರ ಉದ್ದ ಜಿಗಿತದಲ್ಲಿ ಪ್ರಥಮ, 110 ಮೀ. ಹರ್ಡಲ್ಸ್ನಲ್ಲಿ ತೃತೀಯ ಸ್ಥಾನ, ಸುಮೀತ್ ಎಸ್. ಸರಪಳಿ ಎಸೆತದಲ್ಲಿ ಪ್ರಥಮ, ಬಸವರಾಜ ರೂಡಗಿ 400 ಮೀ. ಹರ್ಡಲ್ಸ್ನಲ್ಲಿ ದ್ವೀತಿಯ ಮತ್ತು ರಾಹುಲ್ ತೃತೀಯ ಹಾಗೂ ತೇಜಸ್ ಚವ್ಹಾಣ ಬರ್ಚಿ ಎಸೆತದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗುಂಪು ಆಟದ ಕಬ್ಬಡ್ಡಿ ಹಾಗೂ ಥ್ರೋಬಾಲ್ನಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಬಾಲಕಿಯರ ವೈಯಕ್ತಿಕ ಆಟದಲ್ಲಿ ಸ್ಫೂರ್ತಿ ಪಿ.ಬಿ. 100 ಮೀ. ಓಟ ಹಾಗೂ ತ್ರಿವಿಧ ಜಿಗಿತದಲ್ಲಿ ಪ್ರಥಮ, ಸುಪ್ರಿಯಾ ಕೆ. 800 ಮೀ. ಓಟದಲ್ಲಿ ಪ್ರಥಮ, 4*100 ಮೀ. ರೀಲೆಯಲ್ಲಿ ಬಾಲಕಿಯರು ದ್ವೀತಿಯ ಸ್ಥಾನ, ನೀಲವೇಣಿ ಕವೇಕರ 400 ಮೀ. ಹರ್ಡಲ್ಸ್ನಲ್ಲಿ ದ್ವೀತಿಯ ಹಾಗೂ ಗುಂಪು ಆಡ ಥ್ರೋಬಾಲ್ನಲ್ಲಿ ಬಾಲಕಿಯರು ದ್ವೀತಿಯ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥಾಪಕ ಕಾರ್ಯದರ್ಶಿ ಡಾ. ಶಿವಾನಂದ ಕೆಲೂರ, ಮುಖ್ಯಶಿಕ್ಷಕ ತುಳಜಾರಾಮ ಸುಕ್ತೆ, ಶ್ರೀಶೈಲ ಹೆಗಳಾಡಿ, ದೈಹಿಕ ಶಿಕ್ಷಕ ಸಂಗನಬಸವ ಗುಳಗಿ, ಸುಶ್ಮೀತಾ ಆಲಮೇಲಕರ, ದೇವರಾಜ ಶಿಂಧೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅರಕೇರಿಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಗೈದ ವಿಜಯಪುರದ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳ ತಡದೊಂದಿಗೆ ಶಾಲೆ ಸಿಬ್ಬಂದಿ ಇದ್ದಾರೆ.