ವಿಜಯಪುರ : ನೀಟ್ ಪರೀಕ್ಷೆಯಲ್ಲಿ ಎಕ್ಸಲಂಟ್ ಕಾಲೇಜ್ ವಿದ್ಯಾರ್ಥಿಗಳ ಸಾಧನೆ

1. AMRUTH NELUR - 623
ಅಮೃತ ನೀಲೂರ
Published on

ವಿಜಯಪುರ : ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ವಿಜಯಪುರದ ಎಕ್ಸಲಂಟ್ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಒಟ್ಟು 720 ಅಂಕಗಳಿಗೆ ಅಮೃತ ನೀಲೂರ (623) ಹಾಗೂ ರಿಷೀ ಕೆಂಭಾವಿ (614) ಅಂಕಗಳನ್ನು ಪಡೆದು ಅಮೋಘ ಸಾಧನೆ ಮಾಡುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಉಳಿದಂತೆ ಅಬಿದ ಹುಸೇನ ಬಾಗೇವಾಡಿ (595), ರಾಕೇಶ ಮಾಳಿ (586), ವಿಶಾಲ ಸೊಂಡೂರ (575), ವೆಂಕಟೇಶ ಘೋರ್ಪಡೆ (571), ಪ್ರಲ್ಹಾದ ಕೆಂಚನಗೌಡರ (565), ಕಮಲಾ ಹೂಗಾರ (563), ಮಧು ಗುಳಪ್ಪಗೊಳ (548), ಸೌಮ್ಯಶ್ರೀ ನಾಶಿ (545), ಶೃತಿ ಕೈರವ (542), ಭಾಗ್ಯಶ್ರೀ ಉಟಗಿ (538), ಮದಿಹಾ ಬಾಗಲಕೋಟ (536), ಮೋನಿಕಾ ಜೆ.ಕೆ (535), ತುಷಾರ ಗೌಡರ (528), ಮನೋಜ ಯರನಾಳ (522), ಪದ್ಮಾವತಿ ವಾಲ್ಗದ (520), ನಿತ್ಯಾನಂದ ಹಳೇಮನಿ (518), ರಕ್ಷಿತಾ ವಾಡಕರ (517), ಸಿದ್ದನಗೌಡ ಬೈರೋಡಗಿ (516), ಮುಸ್ತಾಕ ಪಿಂಜಾರ (510), ಮೊಹಮ್ಮದ ಸಾದ ಕಲ್ಮನಿ (510), ವಿರೇಶ ಬಡಿಗೇರ (503), ಸ್ನೇಹಾ ಯಚ್ಚಿ (502) ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಾರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಆಡಳಿತಾಧಿಕಾರಿ ಜೆ.ಎಸ್.ಪೂಜೇರಿ, ಪ್ರಾಂಶುಪಾಲರಾದ ಡಿ.ಎಲ್. ಬನಸೋಡೆ, ಪರಶುರಾಮ ಭಾವಿಕಟ್ಟಿ, ಕಾಲೇಜಿನ ಸಿಬ್ಬಂದಿ ಹಾಗೂ ಪಾಲಕರು ಹರ್ಷ ವ್ಯಕ್ತ ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net