ನೀಟ್​ ಪರೀಕ್ಷೆಯಲ್ಲಿ ಎಕ್ಸಲಂಟ್​ ಸಾಧನೆ

Excellent performance in NEET exam
Published on

ವಿಜಯಪುರ:ವೈದ್ಯಕಿಯ ಪ್ರವೇಶಕ್ಕಾಗಿ ನಡೆದ ನೀಟ್​ ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಎಕ್ಸಲಂಟ್​ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಸರ್ಕಾರಿ ಕೋಟಾದಡಿ 100 ಎಂಬಿಬಿಎಸ್​, 10 ಬಿಡಿಎಸ್​, 72 ಬಿಎಎಂಎಸ್​ ಹಾಗೂ ಬಿಎಚ್​ಎಂಎಸ್​ ಸೇರಿ ಒಟ್ಟು 182 ಸೀಟುಗಳನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಎಕ್ಸಲಂಟ್​ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್​ ಬಸವರಾಜ ಕೌಲಗಿ, 2025ನೇ ಸಾಲಿನ ವೈದ್ಯಕಿಯ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಿರೀಕ್ಷೆಯಂತೆ ಸಂಸ್ಥೆಯು ಕಳೆದ ಬಾರಿಗಿಂತ ಅಧಿಕ ಸೀಟುಗಳನ್ನು ಪಡೆದುಕೊಳ್ಳುವ ಮೂಲಕ ಸಾಧನೆಯ ಪಥದಲ್ಲಿ ಸಾಗುತ್ತಿದೆ. ಈ ಬಾರಿ ನೀಟ್​ ಪರೀೆ ಪ್ರಶ್ನೆ ಪತ್ರಿಕೆ ಕಠಿಣವಾಗಿತ್ತು ಎಂಬುದು ವಿದ್ಯಾರ್ಥಿಗಳ ಅಭಿಮತವಾಗಿತ್ತಾದರೂ, ಯಶಸ್ವಿಯಾಗಿ ಪರೀೆ ಎದುರಿಸಿ ಆ ಮೂಲಕ ವೈದ್ಯರಾಗಬೇಕೆನ್ನುವ ತಮ್ಮ ಕನಸು ನನಸಾಗಿಸಿಕೊಳ್ಳುವ ಜತೆಗೆ ಸಂಸ್ಥೆಯ ಹಿರಿಮೆ ಹೆಚ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಉತ್ತರ ಕರ್ನಾಟಕ ಭಾಗದಲ್ಲೇ ಸಂಸ್ಥೆ ಅತ್ಯುತ್ತಮ ಶಿಕ್ಷಣ ನೀಡುತ್ತ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರತಿ ವರ್ಷವೂ ನಿರೀೆಗೂ ಮೀರಿ ಫಲಿತಾಂಶ ಪಡೆದು ಜನರ ಮನೆ ಮಾತಾಗಿದೆ.ಮಕ್ಕಳಲ್ಲಿ ನೈತಿಕ ಶಿಕ್ಷಣದ ಜತೆಗೆ ಅವರ ಕನಸುಗಳಿಗೆ ಪೂರಕ ವಾತಾವರಣ ನಿರ್ಮಿಸಿದರೆ ಮಾತ್ರ ಸಾಧನೆ ಸುಲಭವಾಗಲಿದೆ. ಆ ನಿಟ್ಟಿನಲ್ಲಿ ನಮ್ಮ ವಿದ್ಯಾಲಯದಲ್ಲಿ ಈ ವಿದ್ಯಾರ್ಥಿಗಳ ಅವಿರತ ಪರಿಶ್ರಮದ ಜತೆಗೆ ಕಾಲೇಜಿನ ಬೋಧಕ ವರ್ಗದವರು ನಿರಂತರ ಶ್ರಮದಿಂದಲೇ ಈ ಫಲಿತಾಂಶ ದೊರೆತಿದೆ ಎಂದರು.

ಈ ಸಾಧನೆಯ ಶ್ರೇಯ ನಮ್ಮ ಆಡಳಿತ ಮಂಡಳಿ ಹಾಗೂ ಎಲ್ಲ ಬೋಧಕ ಬೋಧಕೇತರ ವರ್ಗಕ್ಕೆ ಸಲ್ಲಬೇಕೆಂದು ಪ್ರಾಚಾರ್ಯ ಶ್ರೀಕಾಂತ ಕೆ.ಎಸ್​. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net