

ಮೂಡುಬಿದಿರೆ: ಕೃಷಿ ಬದುಕು ಕೇವಲ ಒಂದು ಉದ್ಯೋಗವಲ್ಲ, ಅದೊಂದು ತಪಸ್ಸು ಮತ್ತು ಋಷಿ ಬದುಕಿಗೆ ಸಮಾನವಾದದ್ದು. ಮಣ್ಣು, ನೀರು ಹಾಗೂ ಜೈವಿಕ ವೈವಿಧ್ಯ ಕಾಪಾಡುವ ಕೃಷಿ ದೇಶದ ಆರ್ಥಿಕ ಮೂಲದ ಪ್ರಧಾನ ಭಾಗವಾಗಿದೆ ಎಂದು ಸಪ್ತಗಿರಿ ಫಾರಂ ಅಂಬೂರಿಯ ಪ್ರಗತಿಪರ ಕೃಷಿಕ ಡಾ.ನಾಗರಾಜ ಶೆಟ್ಟಿ ಅಭಿಪ್ರಾಯಪಟ್ಟರು.
ಮೂಡುಮಾರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕೃಷಿ ಬದುಕಿನ ಸಾಧ್ಯತೆಗಳು ಕುರಿತು ಉಪನ್ಯಾಸ ನೀಡಿದರು.
ಎಕ್ಸಲೆಂಟ್ ಮೂಡುಬಿದಿರೆ ಶೈಕ್ಷಣಿಕ ನಿರ್ದೇಶಕ ಪ್ರೊ.ಪುಷ್ಪರಾಜ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕಿ ಡೈಸಿ ಎಸ್.ಪಿಂಟೋ, ಸುಗಂಧಿ, ಎಸ್‌ಡಿಎಂಸಿ ಉಪಾಧ್ಯಕ್ಷ ಸೌಮ್ಯಾ, ಶಿಬಿರಾಧಿಕಾರಿ ತೇಜಸ್ವಿ ಭಟ್, ಸಹ ಶಿಬಿರಾಧಿಕಾರಿಗಳಾದ ಪ್ರಶಾಂತ ಶೆಟ್ಟಿ, ಡಾ.ವಾದಿರಾಜ ಕಲ್ಲೂರಾಯ, ಸಂಧ್ಯಾ, ದಿವ್ಯಲಕ್ಷ್ಮೀ ರೈ, ಪ್ರದೀಪ, ಅಶೋಕ, ಭಾಸ್ಕರ ನೆಲ್ಯಾಡಿ, ವಿಕ್ರಮ ನಾಯಕ್, ಯಶಸ್ವಿನಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಸುಜಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗುರುರಾಜ್ ವಂದಿಸಿದರು.