ಕುಂದಾಪುರ: ಕುಂದಾಪುರ ಸುಣ್ಣಾರಿಯಲ್ಲಿ 12 ವರ್ಷಗಳ ಹಿಂದೆ 40 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಎಕ್ಸಲೆಂಟ್ ವಿದ್ಯಾಸಂಸ್ಥೆ ಇಂದು ವಿದ್ಯಾರ್ಥಿಗಳ ಸಂಖ್ಯೆ, ಸಾಧನೆಯಲ್ಲಿಯೂ ರಾಜ್ಯಕ್ಕೆ ಮಾದರಿಯಾಗಿ ಬೆಳೆಯುತ್ತಿದೆ. ವಿದ್ಯಾಸಂಸ್ಥೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಸಹಿತ ಎಲ್ಲ ರಂಗದಲ್ಲಿಯೂ ವಿಶಿಷ್ಟ ಸಾಧನೆಯೊಂದಿಗೆ ತನ್ನದೇ ಛಾಪು ಮೂಡಿಸುತ್ತಾ ಬಂದಿದೆ ಎಂದು ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಎಂ.ಮಹೇಶ್ ಹೆಗ್ಡೆ ಹೇಳಿದರು.
ಜೆಇಇ ಮೈನ್ 2025ರ ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜು ಉಡುಪಿ, ಕುಂದಾಪುರ, ಬೈಂದೂರು ತಾಲೂಕಿಗೆ ಪ್ರಥಮ ಸ್ಥಾನಿಯಾಗಿದೆ. 2024ರ ವರ್ಷದ ಫಲಿತಾಂಶಕ್ಕಿಂತ ಅತ್ಯುತ್ತಮ ಫಲಿತಾಂಶ ಪಡೆದಿದ್ದು, 2024ರ ಜೆಇಇ ಮೈನ್ಸ್‌ನಲ್ಲಿ ಶೇ.97.66 ಫಲಿತಾಂಶ ಪಡೆದು, ಈ ವರ್ಷ ಅನನ್ಯ ಯು.ಶೆಟ್ಟಿ 97.69 ಪರ್ಸಂಟೈಲ್‌ನೊಂದಿಗೆ ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ. ವಿಷಯವಾರು ಫಲಿತಾಂಶದಲ್ಲಿ ಹಿಂದಿನ ವರ್ಷ 98.80 ಪರ್ಸಂಟೈಲ್ ದಾಖಲಾಗಿದ್ದರೆ, 2025ನೇ ಸಾಲಿನಲ್ಲಿ ಪ್ರಸ್ತುತಿ ಶೆಟ್ಟಿ 99.51 ಪರ್ಸಂಟೈಲ್ ಪಡೆದಿದ್ದಾರೆ. ಈ ವರ್ಷ 90 ಪರ್ಸಂಟೈಲ್‌ನಿಂದ 99.51 ಪರ್ಸಂಟೈಲ್‌ವರೆಗೆ 21 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ತ್ರಿಶಾ ಪಿ.ಶೆಟ್ಟಿ 98.58, ಅಮರ್‌ದೀಪ್ ಶೆಟ್ಟಿ 98.68, ಶ್ರೀ ಹರ್ಷ ಪೆನ್ನುಗೊಂಡಲ 97.42, ಸ್ಮರಣ್ ಎಂ. 96.33, ಮನ್ವಿತ್ 96.32, ಪ್ರಜ್ವಲ್ ಕೆ. 95.65, ಶಮನ ಯು.ಶೆಟ್ಟಿ 95.59., ದೀಕ್ಷಿತ್ ಶೆಟ್ಟಿ 95.02, ಗಗನ್ 94.72, ಚಿರಾಗ್ ಎಂ.ಕೆ. 94.44, ಸಿಂಚನಾ ಎಸ್.ಶೆಟ್ಟಿ 94.14, ಜಿತೇಶ ಶೆಟ್ಟಿ 93.55, ಆಕಾಶ್ 92.62, ಚಿತ್ರಾ ನಾಯಕ್ 91.37, ಅನ್ವಿತಾ ಪ್ರಭಾಕರ 91.28, ವೃತೀನ್ ಉದಯ ಕುಮಾರ್ 90.36, ತೇಜಸ್ವಿ ಕೃಷ್ಣಾನಂದ್ 90.21, ನಿಹಾಲ್ ಜೆ.ಶೆಟ್ಟಿ 90.04 ಹಾಗೂ ಅವಿಜಿತ್ ಶೆಟ್ಟಿ 90.03 ಪರ್ಸಂಟೈಲ್ ಪಡೆದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಾಂಶುಪಾಲ ನಾಗರಾಜ ಶೆಟ್ಟಿ ಮಾತನಾಡಿ, ಎಕ್ಸಲೆಂಟ್ ಸಂಸ್ಥೆ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಎನ್ನುವಂತೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾದ ಹಿನ್ನೆಲೆಯಲ್ಲಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಮೇಲೆ ತೋರಿಸಿದ ಕಾಳಜಿ ಹಾಗೂ ಶಿಕ್ಷಣದ ಮೇಲೆ ಇಟ್ಟಿರುವ ಗುರುತರ ಜವಾಬ್ದಾರಿ ಗುರುತಿಸಿ ಸುವರ್ಣ ಕನ್ನಡಿಗ 2025 ಪ್ರಶಸ್ತಿಗೆ ಸಂಸ್ಥೆ ಅಧ್ಯಕ್ಷ ಎಂ.ಮಹೇಶ್ ಹೆಗ್ಡೆ ಭಾಜನರಾಗಿದ್ದಾರೆ. ಇದು ಎಕ್ಸಲೆಂಟ್ ಸಂಸ್ಥೆ ಕೀರ್ತಿ ಕಳಶಕ್ಕೆ ದೊರೆತ ಮತ್ತೊಂದು ಹಿರಿಮೆ ಗರಿ ಎಂದರು.
2026-27ನೇ ಶೈಕ್ಷಣಿಕ ಸಾಲಿನಿಂದ ಎಲ್‌ಕೆಜಿಯಿಂದ 6ನೇ ತರಗತಿವರೆಗೆ ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ಈ ಸಾಲಿನಲ್ಲಿ 6ರಿಂದ 10ನೇ ತರಗತಿವರೆಗೆ ಪ್ರಾರಂಭಿಸಲಾಗುವುದು. ಇದಕ್ಕಾಗಿ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ತರಗತಿಯಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಕೆ ಮಾಡಲಾಗುತ್ತಿದ್ದು, ಶಾಲೆ ಪ್ರಾಂಗಣ ನವೀನ ವಿನ್ಯಾಸದೊಂದಿಗೆ ಹಸಿರಿನಿಂದ ಕಂಗೊಳಿಸುವಂತೆ ನಿರ್ಮಿಸಲಾಗುತ್ತಿದೆ. ಎಕ್ಸಲೆಂಟ್ ವಿದ್ಯಾಸಂಸ್ಥೆ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯನ್ನಾಗಿ ರೂಪಿಸಬೇಕೆಂಬ ದೃಢಸಂಕಲ್ಪದಿಂದ ಮುನ್ನಡೆಯುತ್ತಿದ್ದೇವೆ. ಎಂ.ಮಹೇಶ್ ಹೆಗ್ಡೆ ಎಕ್ಸಲೆಂಟ್ ಆಡಳಿತ ಮಂಡಳಿ ಅಧ್ಯಕ್ಷ.