ಆದರ್ಶ ಶಾಲೆ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

Excellent achievement by Adarsh ​​School students
ತಾಲೂಕುಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳನ್ನು ೇತ್ರ ಶಿಣಾಧಿಕಾರಿ ಟಿ.ಎಸ್​. ಆಲಗೂರ, ಮುಖ್ಯಶಿಕ್ಷಕ ಎಸ್​.ಜಿ ಬನಸೋಡೆ ಹರ್ಷ ಗೌರವಿಸಿದರು.
Published on

ಇಂಡಿ: ತಾಲೂಕುಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಹಿರಿಯರ ವಿಭಾಗದಲ್ಲಿ ಸಾತ್ವಿಕ್​ ಪಾಟೀಲ್​ ಭಕ್ತಿ ಗೀತೆಯಲ್ಲಿ ಪ್ರಥಮ ಸ್ಥಾನ, ಶಿವಾನಿ ಕಾಗೆ ಇಂಗ್ಲಿಷ್​ ಕಂಠಪಾಠದಲ್ಲಿ (ಪ್ರಥಮ), ಪ್ರೌಢ ವಿಭಾಗದಲ್ಲಿ ತನು ಅಕಳವಾಡಿ ಪ್ರಬಂಧ ಸ್ಪರ್ಧೆಯಲ್ಲಿ (ಪ್ರಥಮ), ಸಹನಾ ದ್ಯಾಮಗೊಂಡ ಇಂಗ್ಲಿಷ್​ ಭಾಷಣದಲ್ಲಿ (ದ್ವೀತಿಯ), ಚಿತ್ರಕಲೆಯಲ್ಲಿ ಜ್ಯೋತಿ ಮೇತ್ರಿ (ದ್ವೀತಿಯ) ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇಂಡಿ ೇತ್ರ ಶಿಣಾಧಿಕಾರಿ ಟಿ.ಎಸ್​. ಆಲಗೂರ, ಮುಖ್ಯಶಿಕ್ಷಕ ಎಸ್​.ಜಿ ಬನಸೋಡೆ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net