ಆದರ್ಶ ಶಾಲೆ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

Excellent achievement by Adarsh ​​School students
ತಾಲೂಕುಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ, ಮುಖ್ಯಶಿಕ್ಷಕ ಎಸ್.ಜಿ ಬನಸೋಡೆ ಹರ್ಷ ಗೌರವಿಸಿದರು.
Published on

ಇಂಡಿ: ತಾಲೂಕುಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಹಿರಿಯರ ವಿಭಾಗದಲ್ಲಿ ಸಾತ್ವಿಕ್ ಪಾಟೀಲ್ ಭಕ್ತಿ ಗೀತೆಯಲ್ಲಿ ಪ್ರಥಮ ಸ್ಥಾನ, ಶಿವಾನಿ ಕಾಗೆ ಇಂಗ್ಲಿಷ್ ಕಂಠಪಾಠದಲ್ಲಿ (ಪ್ರಥಮ), ಪ್ರೌಢ ವಿಭಾಗದಲ್ಲಿ ತನು ಅಕಳವಾಡಿ ಪ್ರಬಂಧ ಸ್ಪರ್ಧೆಯಲ್ಲಿ (ಪ್ರಥಮ), ಸಹನಾ ದ್ಯಾಮಗೊಂಡ ಇಂಗ್ಲಿಷ್ ಭಾಷಣದಲ್ಲಿ (ದ್ವಿತೀಯ), ಚಿತ್ರಕಲೆಯಲ್ಲಿ ಜ್ಯೋತಿ ಮೇತ್ರಿ (ದ್ವಿತೀಯ) ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ, ಮುಖ್ಯಶಿಕ್ಷಕ ಎಸ್.ಜಿ ಬನಸೋಡೆ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net