ಯುವ ಜನೋತ್ಸವದಲ್ಲಿ "ಎಕ್ಸಲಂಟ್​' ಸಾಧನೆ

Excellent achievement at the Youth Festival
ವಿಜಯಪುರದ ಎಕ್ಸಲಂಟ್​ ಕಾಲೇಜಿನಲ್ಲಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಸಾಧಕರ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದರು. ಪ್ರಾಚಾರ್ಯ ಶ್ರೀಕಾಂತ ಕೆ.ಎಸ್​. ಹಾಗೂ ವಿದ್ಯಾರ್ಥಿಗಳಿದ್ದಾರೆ.
Published on

ವಿಜಯಪುರ: ನಗರದ ಎಎಸ್​ಪಿ ಕಾಮರ್ಸ್​ ಕಾಲೇಜ್​ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್​ ಹಾಗೂ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಬಿಎಲ್​ಡಿಇ ಸಂಸ್ಥೆ, ಕರ್ನಾಟಕ ರಾಜ್ಯ ಯುವ ಸಂಗಳ ಒಕ್ಕೂಟಗಳ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಯುವ ಜನೋತ್ಸವದಲ್ಲಿ ಎಕ್ಸಲಂಟ್​ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಅಮೋ ಸಾಧನೆ ಮೆರೆದಿದ್ದಾರೆ.

ವಿಜ್ಞಾನ ಮಾದರಿ ತಯಾರಿಕೆ ವೈಯಕ್ತಿಕ ವಿಭಾಗದಲ್ಲಿ ಸಂದೇಶ ಅಮರಶೆಟ್ಟಿ (ಪ್ರಥಮ), ಅನುರಾಧಾ ಕೇಶ್ವಾಪುರ (ದ್ವೀತಿಯ), ವಿರೇಶ ಪಟ್ಟಣಶೆಟ್ಟಿ (ತೃತೀಯ) ಸ್ಥಾನ ಪಡೆದಿದ್ದಾರೆ. ಗುಂಪು ವಿಭಾಗದಲ್ಲಿ ವಿಜಯಕುಮಾರ ತೋಡಗಿ ತಂಡ (ಪ್ರಥಮ), ಪ್ರತಿಕ ಗಿರಣಗೌಡ ತಂಡ (ದ್ವೀತಿಯ), ಸುತೇಜ್​ ಕುಲಕರ್ಣಿ ತಂಡ (ತೃತೀಯ) ಸ್ಥಾನ ಪಡೆದರು. ಭಾಷಣ ಸ್ಪರ್ಧೆಯಲ್ಲಿ ಕೋಮಲ್​ ಭಾವಿಕಟ್ಟಿ (ದ್ವೀತಿಯ), ಪೇಂಟಿಗ್​ ಸ್ಪರ್ಧೆಯಲ್ಲಿ ಅನುಷ್ಕಾ ಶಾಬಾದಿ (ದ್ವೀತಿಯ), ಕವಿತೆ ರಚನೆ ಸ್ಪರ್ಧೆಯಲ್ಲಿ ಸಾವಿತ್ರಿ ಕುಲಕರ್ಣಿ (ತೃತೀಯ), ಮೊಬೈಲ್​ ಫೋಟೋಗ್ರಫಿ ಸ್ಪರ್ಧೆಯಲ್ಲಿ ಭಾಸ್ಕರ ನ್ಯಾಮಗೊಂಡ (ದ್ವೀತಿಯ), ಭಾಸ್ಕರ ವಿಧಾತೆ (ತೃತೀಯ) ಸ್ಥಾನ ಪಡೆದರು.

ವಿದ್ಯಾರ್ಥಿಗಳ ಈ ಸಾಧನೆಗೆ ಎಕ್ಸಲಂಟ್​ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹರ್ಷ ವ್ಯಕ್ತಪಡಿಸಿದರು. ಶಾಲೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ "ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಂತಾಗದೇ ಬತ್ತ ಬೆಳೆಯುವ ಗದ್ದೆಗಳಾಗಬೇಕು. ಪಠ್ಯದ ಜೊತೆಯಲ್ಲಿ ಪಠ್ಯ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಬುದ್ಧಿಬಲದ ಜೊತೆಯಲ್ಲಿ ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕು' ಎಂದರು.

ಪ್ರಾಚಾರ್ಯ ಶ್ರೀಕಾಂತ ಕೆ.ಎಸ್​. ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net