

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಆಟ, ಪಾಠಗಳೆಲ್ಲಾ ಸೇರಿದರೆ ಮಾತ್ರ ವಿದ್ಯಾರ್ಥಿಯ ಬದುಕಿಗೆ ಅರ್ಥ. ಬರೇ ಪಾಠ- ಪ್ರವಚನಗಳು ಪೂರ್ಣತೆ ನೀಡಲಾರವು. ನಾಲ್ಕು ಗೋಡೆಗಳ ನಡುವೆ ಕಲಿಯಲಾಗದ್ದನ್ನು ಮಕ್ಕಳು ಆಟದ ಮೈದಾನದಲ್ಲಿ ಕಲಿಯಬಹುದು. ನಾಲ್ಕು ಜನರ ಮಧ್ಯೆ ತಿಳಿಯಬಹುದು ಎಂದು ಅರಮಲೆಬೆಟ್ಟ ಕ್ಷೇತ್ರದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು ಹೇಳಿದರು.
ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿದ ‘ಎಕ್ಸೆಲ್ ಫನ್ ಫಿನಿಟಿ’ ಮಕ್ಕಳ ಹೊರಾಂಗಣ ಆಟದ ಆಲಯ ಉದ್ಘಾಟಿಸಿ ಮಾತನಾಡಿದರು.
ಯಂಗ್ ಚಾಲೆಂಜರ್ಸ್ ಆಫ್ ಮುಂಡಾಜೆಯ ವರಿಷ್ಠರಾದ ನಾಗೇಂದ್ರ ರಾವ್ ಮಾತನಾಡಿ, ಎಕ್ಸೆಲ್ ಪದವಿ ಪೂರ್ವ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಅಂಥದೇ ಸಾಧನೆ ಎಕ್ಸೆಲ್ ಟೆಕ್ನೋ ಸ್ಕೂಲ್ ಕೂಡ ಮಾಡಲಿದೆ ಎಂದರು.
ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಎಕ್ಸೆಲ್ ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್, ಕಾಲೇಜು ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಉಪಸ್ಥಿತರಿದ್ದರು. ಟೆಕ್ನೋ ಸ್ಕೂಲ್ ಮುಖ್ಯ ಶಿಕ್ಷಕಿ ಸಹನಾ ಜೈನ್, ಕಾಲೇಜು ಶೈಕ್ಷಣಿಕ ಸಂಯೋಜಕಿ ನಿಶಾ ಪೂಜಾರಿ, ಬೋಧಕ- ಬೋಧಕೇತರ ಸಿಬ್ಬಂದಿ ಬಳಗ, ಪಾಲಕರು ಇದ್ದರು.
ಶಾಲಾ ಪುಟಾಣಿಗಳು ಪ್ರಾರ್ಥಿಸಿದರು. ಶೈಕ್ಷಣಿಕ ಸಂಯೋಜಕಿ ಲೀನಾ ಫ್ಲೋರಿನ್ ಪಿಂಟೋ ಸ್ವಾಗತಿಸಿದರು. ಶಿಕ್ಷಕಿ ಸ್ವಾತಿ ಅತಿಥಿ ಪರಿಚಯ ಮಾಡಿದರು. ಪವಿತ್ರಾ ಸಹಕರಿಸಿದರು. ಗೀತಾ ನಿರೂಪಿಸಿದರು. ಚೇತನಾ ವಂದಿಸಿದರು. ಸಮಾರಂಭದ ಬಳಿಕ ವಿದ್ಯಾರ್ಥಿಗಳ ಹೆತ್ತವರಿಗೆ ವಿವಿಧ ವಿನೋದ- ಆಟೋಟ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಕೋನ ನಮ್ಮದು. ಇದೀಗ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಪ್ಲೇ ಹೋಮ್ ಮಾಡಲಾಗಿದೆ. ಅತ್ಯಂತ ವೈಜ್ಞಾನಿಕವಾಗಿ, ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಪ್ರಬುದ್ಧತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಇದನ್ನು ಸಂಯೋಜಿಸಲಾಗಿದೆ. ಸುಮಂತ್ ಕುಮಾರ್ ಜೈನ್, ಅಧ್ಯಕ್ಷ, ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ https://www.vijayavani.net/kaveri-book https://www.vijayavani.net/bjp-training