ಶಿಕ್ಷಣದಿಂದ ಸ್ವಾಭಿಮಾನದ ಬದುಕು : ಅಭಯ ಚಂದ್ರ ಜೈನ್ ಅನಿಸಿಕೆ

New Project (23)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಎಕ್ಸೆಲ್ ಕಾಲೇಜು ಸುಮಂತ್ ಕುಮಾರ್ ಜೈನ್ ನಾಯಕತ್ವದಲ್ಲಿ, ಶಿಕ್ಷಕರ ಸಹಕಾರದೊಂದಿಗೆ ರಾಜ್ಯದ ಪ್ರತಿಷ್ಠಿತ ಪಿಯು ಕಾಲೇಜು ಆಗಿ ಪರಿವರ್ತನೆ ಆಗಿದೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಹೇಳಿದರು.

ಎಕ್ಸೆಲ್ ಪದವಿಪೂರ್ವ ಕಾಲೇಜು ವಿದ್ಯಾಸಾಗರ ಮತ್ತು ಅರಮಲೆಬೆಟ್ಟ ಕ್ಯಾಂಪಸ್‌ನಲ್ಲಿ ನಡೆದ ಎಕ್ಸೆಲ್ ಪರ್ಬ 2024ರ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನದ ಫಲದಿಂದಾಗಿ ಸಮಾಜದ ಕಟ್ಟ ಕಡೆಯ ಜನರಿಗೂ ಕೂಡ ಈ ದೇಶದಲ್ಲಿ ಆಳುವಂತಹ ಶಕ್ತಿ ದೊರಕಿದೆ. ಶಿಕ್ಷಣ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಸ್ವಾಭಿಮಾನ, ಗೌರವ ಕೊಡುತ್ತದೆ ಎಂದರು.

ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಮಾತನಾಡಿ, ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಎಕ್ಸೆಲ್ ಸಂಸ್ಥೆ ಆಯೋಜಿಸಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಹಿಂದೆ ಗುರುವಿರಬೇಕು, ಮುಂದೆ ಗುರಿ ಇರಬೇಕು. ಪಿಯುಸಿ ನಾವು ನೆಲೆ ನಿಲ್ಲುವಂತಹ ಅಡಿಪಾಯವಾಗಿದೆ. ಈ ಶಿಕ್ಷಣವನ್ನು ಗುಣಮಟ್ಟದಲ್ಲಿ ಪಡೆದುಕೊಂಡರೆ ಮುಂದಿನ ದಿನಗಳಲ್ಲಿ ಸ್ವಾವಲಂಬಿಯಾಗಿ ಬದುಕಲು ಸಾಧ್ಯ. ಸ್ವಾವಲಂಬಿ ಬದುಕಿನ ಶಿಕ್ಷಣ ಎಕ್ಸಲ್ ಸಂಸ್ಥೆಯಲ್ಲಿ ದೊರೆಯುತ್ತದೆ ಎಂದರು.

ಕಳೆದ ವರ್ಷದ ದ್ವಿತೀಯ ಪಿಯುಸಿಯಲ್ಲಿ ನೀಟ್, ಸಿಇಟಿ, ಜೆಡಬ್ಲೂೃ ಪರೀಕ್ಷೆಯಲ್ಲಿ ಸಾಧಿಸಿದ ಸಾಧಕರನ್ನು ‘ಅಕಾಡೆಮಿಕ್ ಅಚ್ಯುವರ್ಸ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಐಎಎಸ್ ಅಧಿಕಾರಿ ರಾಜೇಶ್ವರಿ, ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಡಾ.ಶಿವಪ್ರಕಾಶ್, ಡಾ.ಪ್ರದೀಪ್ ಕುಮಾರ್ ನಾವರ, ನಿರೂಪಕಿ ವಿದ್ಯಾಶ್ರೀ, ಉಪನ್ಯಾಸಕ ಅಭಿರಾಮ್ ಉಪಸ್ಥಿತರಿದ್ದರು.

ಪ್ರಾಂಶುಪಾಲ ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಪ್ರಜ್ವತ್ ರೈ ಸಂಸ್ಥೆಯ ಪರಿಚಯ, ಸಾಧನೆ ತಿಳಿಸಿದರು. ಪ್ರಾಚಾರ್ಯ ಪ್ರಜ್ವಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net