ಎಕ್ಸೆಲ್ ಪಿಯು ಕಾಲೇಜು ಸಮಗ್ರ ಚಾಂಪಿಯನ್ : ಪಿನಾಕಲ್-2024 ಸ್ಪರ್ಧೆ

excel
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉಜಿರೆ ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ ನಡೆದ ಪಿನಾಕಲ್-2024 ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್ ಆಗಿದ್ದಾರೆ.

ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೀವತ್ಸ, ಋತ್ವಿಕ್, ಮಾರ್ಕೆಟಿಂಗ್ ಸ್ಪರ್ಧೆಯಲ್ಲಿ ನಂದನ್, ಅಭಿನವ, ಮಾರ್ಕೆಟಿಂಗ್ ಸ್ಪರ್ಧೆಯಲ್ಲಿ ಅನಿಶಾ, ಮಿಸ್ಬಾ ಅಂಜುಮ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವೆಂಟ್ ಮ್ಯಾನೇಜ್‌ಮೆಂಟ್ ಸ್ಪರ್ಧೆಯಲ್ಲಿ ತನಯ್, ಭವೀಶ್, ನೃತ್ಯ ಸ್ಪರ್ಧೆಯಲ್ಲಿ ದಿಯಾ, ವಿದ್ಯಾ ಗೌರಿ, ಅಶಿತಾ, ದರ್ಶಿನಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಎಕ್ಸೆಲ್ ಪಿಯು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹಾಗೂ ಪ್ರಾಂಶುಪಾಲ ಡಾ.ನವೀನ್ ಕುಮಾರ ಮರಿಕೆ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ. ಹಾಗೂ ವಿಭಾಗ ಮುಖ್ಯಸ್ಥರಾದ ಪ್ರಸನ್ನ ಭೋಜ ಮಾರ್ಗದರ್ಶನದಲ್ಲಿ, ವಾಣಿಜ್ಯ ವಿಭಾಗದ ಉಪನ್ಯಾಸಕರು ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net