ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕಟ್ಟಡ ಪರಿಶೀಲನೆ: ತಾವರಗೇರಾ ಸರ್ಕಾರಿ ಪದವಿ ಕಾಲೇಜಿಗೆ ವಿಎಸ್‌ಕೆ ವಿವಿ ನಿಯೋಗ ಭೇಟಿ

140322 Tavaragera VSK VV Team Visit College
ತಾವರಗೇರಾದ ಸರ್ಕಾರಿ ಪದವಿ ಕಾಲೇಜಿಗೆ ವಿಎಸ್‌ಕೆ ವಿವಿ ಪರೀಕ್ಷಾ ವಿಭಾಗದ ನಿಯೋಗವು ಭೇಟಿ ನೀಡಿ ಪರಿಶೀಲಿಸಿತು.
Published on

ತಾವರಗೇರಾ: ಪರೀಕ್ಷಾ ಕೇಂದ್ರ ಸ್ಥಾಪನೆ ಹಿನ್ನೆಲೆಯಲ್ಲಿ ವಿಎಸ್‌ಕೆ ವಿವಿ ಪರೀಕ್ಷಾ ವಿಭಾಗದ ನಿಯೋಗ ಸೋಮವಾರ ಪಟ್ಟಣದ ಸರ್ಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿ ಕಟ್ಟಡ ಪರಿಶೀಲಿಸಿತು.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ 581 ವಿದ್ಯಾರ್ಥಿಗಳಿದ್ದಾರೆ. ಪ್ರತಿ ಸಲ ಪರೀಕ್ಷೆ ಬರೆಯಲು ಕುಷ್ಟಗಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇದರಿಂದ ತೀವ್ರ ತೊಂದರೆಯಾಗುತ್ತಿತ್ತು. ಹೀಗಾಗಿ ಕಳೆದೊಂದು ವರ್ಷದಿಂದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಪ್ರಾಚಾರ್ಯರು, ಸಂಬಂಧಿಸಿದ ಸಚಿವರು, ವಿವಿ ಗಮನ ಸೆಳೆದಿದ್ದರು. ಇದಕ್ಕೆ ಸ್ಪಂದಿಸಿರುವ ವಿವಿ, ನಿಯೋಗವನ್ನು ಕಳಿಸಿದೆ. ನಿಯೋಗದ ಅಧ್ಯಕ್ಷ ಪ್ರೊ.ಭೀಮನಗೌಡ, ಸದಸ್ಯರಾದ ಪ್ರೊ.ವೆಂಕಟಯ್ಯ, ಪ್ರೊ.ಸಂತೋಷ್, ಕಾಲೇಜಿನ 14 ಕೊಠಡಿಗಳು, ಶೌಚಗೃಹ, ನೀರಿನ ವ್ಯವಸ್ಥೆ, ಸುರಕ್ಷತೆ ಬಗ್ಗೆ ಕೂಲಂಕಷವಾಗಿ ವೀಕ್ಷಣೆ ಮಾಡಿದರು. ಮಾ.15ರಂದು ವಿವಿ ಕುಲಸಚಿವರಿಗೆ ವರದಿ ಸಲ್ಲಿಸಲಾಗುವುದು ಎಂದು ತಂಡ ತಿಳಿಸಿತು.

ಪ್ರಾಚಾರ್ಯ ಲೋಹಿತ ಕುಮಾರ, ಪ್ರಾಧ್ಯಾಪಕ ಲವ ಕುಮಾರ್, ವ್ಯವಸ್ಥಾಪಕ ವಂಟೆಳಿ, ಕಾಲೇಜು ಅಭಿವೃದ್ಧಿ ಸದಸ್ಯರಾದ ಡಾ.ಶಾಮೀದ ದೋಟಿಹಾಳ , ಶೇಖರಗೌಡ ಸರನಾಡಗೌಡರ್, ವೆಂಕನಗೌಡ ವಿಠಲಾಪುರ, ಅಮರೇಶ ಗಾಂಜಿ ಹಾಗೂ ಷಣ್ಮುಖಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net